logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂತುಚೇತ
(ನಾ).
ಕಾಮಾತುರವಾದ ಮನಸ‍್ಸು; ಕಾಮಾಸಕ‍್ತಿ :
ನೀರೇಜಪರ್ಣೋತ‍್ಕರಮೆನುತೆ ಮೊದಲ‍್ಗೊಂಡುದಂಭೋಜ ಸದ‍್ಮಾಂತದೊಳುದ‍್ಯತ‍್ಕಂತುಚೇತಂ ತೊೞಲಲವಿರತಂ ಚಕ‍್ರವಾಕಂ ವರಾಕಂ
(ಚಂದ‍್ರಪು. ೮-೧೦).
[ಕಂತು3 +ಚೇತ].

ಕಂತುಧೇನು
(ನಾ).
ಕಾಮಧೇನು :
ಕಡಿವೆನದೆಂತು ಕಲ‍್ಪದ‍್ರುಮವನೆಲವದ ಸಂತತಿಯ ಫಲಗಳನು ನೆಚ‍್ಚಿ ಪಯೋವಿಹೀನೆಯನು ಕಂತುಧೇನುವ ಮಾೞೆ ಬೆಲೆಗೊಂಬಂತೆ
(ನಿಭಾಗ. ೮-೧೬-೪೩).
[ಕಂತು ? +ಧೇನು].

ಕಂತುಪಿತ
(ನಾ).
ಕಾಮನ ತಂದೆ; ವಿಷ‍್ಣು :
ಕಂತುಪಿತ ಸನ‍್ನಿಭನು ಸತಿಯನು ಸಂತವಿಸಿ ಮರಳಿದನು
(ಕುವ‍್ಯಾಆ. ೪-೪೬).
[ಕಂತು3 ? + ಧೇನು].

ಕಂತುಮಥನ
(ನಾ).
ಕಾಮನನ‍್ನು ಮಥಿಸಿದನು; ಶಿವ :
ಚಿಂತಿಸಿದೊಡೇನಹುದು ಹೊಗುವೆನು ಕಂತುಮಥನನ ಮೞೆಯನು
(ಕುವ‍್ಯಾಅ. ೨೨-೪೩).
[ಕಂತು3 +ಮಥನ].

ಕಂತುಮರ್ದನ
(ನಾ).
ಕಂತುಮಥನ;
ನೆನೆದು ಕೀರ್ತಿಸಲಾಗಿ ಬಯಲಾದ ಕಂತುಮರ್ದನನೆ ಬಂದಾ ಮುನಿವ‍್ರಾತಕ‍್ಕೆ ಕೃಪೆಯಿಂ ಪ‍್ರಸನ‍್ನನಾಗಿ
(ವೀಶೈಪು. ೫-೨-೨೫).
[ಕಂತು3 + ಮರ್ದನ].

ಕಂತುವೈರಿ
(ನಾ).
ಕಂತುವಿಗೆ ಶತ‍್ರುವಾದವನು; ಶಿವ :
ಕಂತುವೈರಿಗೆ ತನ‍್ನ ನೇಮವನೆಂತು ತಪ‍್ಪಿಸಬಹುದು
(ಬಸಪು. ೪೩-೨೩).
[ಕಂತು3 + ವೈರಿ].

ಕಂತುಶರ
(ನಾ).
ಕಂತುಚಾಪ :
ಮೃಡಹಾಸದ‍್ಯುತಿಯಂತೆ ಕಂತುಶರ ದಂತಿರ್ದಚ‍್ಚವೆಳ‍್ದಿಂಗಳಂ ಕಡುದಣ‍್ಪಿಂಗೆಡೆಗೊಂಡಿದೊಂದು ಬಿಸಿಲೆಂದಾಶ‍್ಚರ್ಯದಿಂದಂ ಜನಂ ನಡೆ ನೋಡುತ‍್ತೆ
(ಜಗವಿ. ೪-೭೪).
[ಕಂತು3 +ಶರ].

ಕಂತುಹರ
(ನಾ).
ಕಂತುಮಥನ :
ಕಂತುಹರನಿಪ‍್ಪ ಸೆಜ‍್ಜಯ ಸೊಬಗನೊಳಕೊಂಡು ಎಸೆವ ಪುರದೊಳಗೆಲ‍್ಲ ಹರಮಯಂ ಶಿವಮಯಂ
(ತಿರುರಹ. ೨-೧೪).
[ಕಂತು 3 +ಹರ2].

ಕಂತೆ 1
(ನಾ).
ಹುಲ‍್ಲು ಮುಂತಾದುವುಗಳ ಹೊರೆ, ಕಟ‍್ಟು, ಪಿಂಡಿ :
ಊರಲೊಕ‍್ಕಲಲೊನ‍್ದು ಪೊೞೆಯುಂ ಪತ‍್ತುಕೊಳಗ ಭತ‍್ತಮುಂ ಒನ‍್ದುಕನ‍್ತೆಯು ಬಣ‍್ನಿಗೆ ಮೂಗುಳಮಂ ಕಪ‍್ಪಡಕ‍್ಕೆ ಪೞ‍್ತಯುಂ ಬ‍್ರಹ‍್ಮಲಿಂಗಿಭೞರ್ಗೆ ಕೊಟ‍್ಟುದು
(ಮೈಆರಿ. ೧೯೪೬; ೨೮-೧೮; 1032);

ಕಂತೆ 1
(ನಾ).
ಹದಿನೆಂಟು ಧಾನ‍್ಯಗಳನ‍್ನು ..ಕಂತೆಯಂ ಕಟ‍್ಟಿ ಬಣಬೆಯನ‍್ನೊಟ‍್ಟಿ
(ವಚಶಾ.II, ೭೬);


logo