logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂತುಕ
ಕಂದುಗ
(ನಾ).
ಕಂದುಗ:“ಕಂದುಗ (ಕಂತುಕ) – ಕಂದುಕ = ಚೆಂಡು” (ತದ‍್ಭಕೋ. ೬).

ಕಂತುಕ
(ನಾ).
‘ಕರಗಂದುಗ’ ಪರಾ.
[<ಸಂ. ಕಂದುಕ]

ಕಂತುಕಕೇಳಿ
(ನಾ).
ಚೆಂಡಾಟ;
ಕಂತುಕಕೇಳಿಗಿನ‍್ನೆಲ‍್ಲಿಗೆ ಪೋದಪೆ ಕಂತುಸನ‍್ನಿಭ ದಿವ‍್ಯಾಂಗ
(ಕುರಾಸಾಂ. ೩೨-೧೦೧).
[ಕಂತುಕ + ಕೇಳಿ (=ಕೇಲಿ)]

ಕಂತುಕಕ‍್ರೀಡೆ
(ನಾ).
= ಕಂತುಕಕೇಳಿ:
ದಿಗ‍್ಗಜಂಗಳನಜಾಂಡಂಗಳಂ ಬಿಡೆ ಕಂತುಕಕ‍್ರೀಡೆಯಾಡುವೆನೊ ಬೇಗ ಬೆಸಸು
(ವೀಶೈಪು. ೩-೩-೨೬).
[ಕಂತುಕ + ಕ‍್ರೀಡೆ]

ಕಂತುಕಖೇಲನ
(ನಾ).
ಕಂತುಕಕೇಳಿ :
ಬರ್ಪ ಪರ್ವತಗಳೊಗ‍್ಗೈಯಿಂದ ಪಿಡಿದೊಂದನೊಂದ ಸಂಬಂಧಗೈವುದಮಿರ್ದನೊಡನೆ ಕಂತುಕಖೇಲನಂಗೈವನಂತನಾಯಾಸದಿಂ
(ವೆಂಕಾರಾ. ೬-೮-೧೦).
[ಕಂತುಕ +ಖೇಲನ].

ಕಂತುಕಮಾಯಾವಿದ‍್ಯೆ
(ನಾ).
ಚೆಂಡನ‍್ನು ಮಾಯಗೊಳಿಸುವ ವಿದ‍್ಯೆ(?) :
ವೈಶ‍್ಯಸುತ ಲೋಕವಿಸ‍್ಮಯಮಾದರಣ‍್ಯಕ‍್ಕೈದಿ ಕಂಗಳಿಂದ ಕಂತುಕಮಾಯಾವಿದ‍್ಯೆಯನೆಲ‍್ಲವನು ಅಭ‍್ಯಾಸವ ಮಾಡಿ
(ಕಕುಮಾ. ೧೬೧-೧೦).
[ಸಂ. ಕಂತುಕಮಾಯಾವಿದ‍್ಯಾ (ಕಂತುಕ +ಮಾಯಾ+ವಿದ‍್ಯಾ)].

ಕಂತುಕಳಂಬ
(ನಾ).
ಕಾಮನಬಾಣ :
ಮಹೀಕಾಂತಾತ‍್ಮಜೆ ಚಿಂತೆಯಿಂದೆ ಬರಲೊಡನದಟಿಂ ಕಂತುಕಳಂಬಕದಂಬಂ ಸ‍್ವಾಂತವನೊಳಪೊಕ‍್ಕುದಂದು ಯತಿಪುಂಗವರಾ
(ಹಮ‍್ಮೀರ. ೬-೨೫).
[ಕಂತು3 + ಕಳಂಬ (= ಕಲಂಬ)].

ಕಂತುಕುಂತ
(ನಾ).
ಕಂತುವಿಗೆ ಕುಂತಪ‍್ರಾಯನಾದವನು; ಶಿವ; ಈಶ‍್ವರ
ಚಿತ‍್ಕಾಮಿನೀಕಾಂತ ಹೃತ‍್ಕಾಂತ ಸಾಹಸೋದ‍್ಯತ‍್ಕಂತುಕುಂತ
(ಉದ‍್ಭದೇ. ೬-೩೦).
[ಕಂತು3 +ಕುಂತ].

ಕಂತುಕೇಳಿ
(ನಾ).
ರತಿಕ‍್ರೀಡೆ; ಸಂಭೋಗ :
ಕಂತುಸನ‍್ನಿಭ ದಿವ‍್ಯಾಂಗ ಕಂತುಕೇಳಿಯನೆಸಗೆನ‍್ನೊಡನೆಂದರ್ಥಾಂತರದಿಂದವಳುಸುರೆ
(ಕುರಾಸಾಂ. ೩೨-೧೦೧).
[ಕಂತು3 +ಕೇಳಿ (= ಕೇಲಿ)].

ಕಂತುಚಾಪ
(ನಾ).
ಮನ‍್ಮಥನ ಬಿಲ‍್ಲು; ಕಬ‍್ಬಿನ ಬಿಲ‍್ಲು :
ಕಂಪನಕ‍್ಷಿಗಳ ಚಂದ‍್ರಿಕೆ ಚಂದ‍್ರಿಕೆಯಂ ಪಳಂಚೆ ಗೇಯದ ರುತಿ ಕಂತುಚಾಪ ರುತಿಯೊಳ್ ತಡಮಾಗೆ
(ಜಗವಿ. ೧೬-೧೧೩).
[ಕಂತು3 +ಚಾಪ1].


logo