logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂತಿಕೆ
(ನಾ).
ಪ‍್ರಭಾವತಿಯುಂ ಪದ‍್ಮಾವತಿಯರೆಂಬ ಕಂತಿಕೆಯರ ಸಾರೆ ರತ‍್ನಾವಳಿ ತಪದೊಳ್ ನೆಗೞ‍್ದು ಅಚ‍್ಯುತಕಲ‍್ಪದೊಳ್ ಪ‍್ರತೀಂದ‍್ರನಾದೊಳ್
(ಚಾವುಂಉ. ೧೯);

ಕಂತಿಕೆ
(ನಾ).
ಸುರಮಂಜರಿ ಕಂತಿಕೆ ಚಾರಿತ‍್ರವನಿರದಾಂತು ತಪಿಸುತಲಿರಲು
(ಚಾವುಂಉ. ೧೯);
[ಕಂತಿ2 + -ಕೆ?]

ಕಂತಿಸು
(ಕ‍್ರಿ).
ಆರಿಸು; ನಂದಿಸು (ಕಿ).
[ಕಂತು1 + -ಇಸು3]

ಕಂತು1
(ಕ‍್ರಿ).
೧. ಮುಳುಗು; ಅಡಗು:
ನಾಳೆಗಂ ನಳಿನಸಖ ಕಂತು ವನಕಂ ಕಾಯ‍್ವೆ ಸೈಂಧವನ ರಣದಿ
(ತುರಂಗ. ೫೩-೬೫);

ಕಂತು1
(ಕ‍್ರಿ).
ಮುತ‍್ತಣ‍್ಣನು ಬ‍್ರಾಹ‍್ಮಣನ ಮನೆಗೆ ಬರುವಾಗ ಹೊತ‍್ತು ಕಂತುತ‍್ತಿತ‍್ತು
(ಈ ಕಥೆ. ೯೮);

ಕಂತು1
(ಕ‍್ರಿ).
ಕಂತಿದೆ ನೀ ದಿನಾಂತದಿನನಂತೆ
(ಗಿಳಿವಿಂ. ೫೩-೧೨);

ಕಂತು1
(ಕ‍್ರಿ).
ವೆಂಕಮ‍್ಮ ಆಗಲೇ ಸರೋವರದ ನೀರಲ‍್ಲಿ ಮಂಡಿ ಕಂತುವತನಕ ಮುಂದೆ ಸಾಗಿದ‍್ದರು
(ಪದ‍್ಮಸ. ೨೬೪).

ಕಂತು1
(ಕ‍್ರಿ).
೨. (ಕರಾ) ಚುಚ‍್ಚು; ನಾಟು:
ನಡೆಯುವಾಗ ಮುಳ‍್ಳು ಕಂತೀತು, ಜೋಕೆ
(ರೂಢಿ).
[ದೇ. || ತುಳು. ಕಂತ್, ಕಂತು]

ಕಂತು2
(ನಾ).
೧. ಅವಧಿ; ವಾಯಿದೆ; ಗಡು. ೨. ಕೊಡಬೇಕಾಗಿರುವ ಹಣ, ಕಾಳು ಅಥವಾ ಇನ‍್ನು ಯಾವುದನ‍್ನೇ ಆಗಲಿ ನಿಯಮಿತವಾದ ಅವಧಿಗೆ ಸರಿಯಾಗಿ ಮುಟ‍್ಟಿಸಬೇಕಾದ ಪಾಲು; ನಿಶ‍್ಚಿತಪಡಿಸಿದೆ ಮೊತ‍್ತ; ಕಿಸ‍್ತು:
ಕಂಪನಿಯವರು ಸಮಾಜಕ‍್ಕೆ ಕಂತಿನ ಮೇಲೆ ಆರು ಹೊಲಿಗೆಯಂತ‍್ರಗಳನ‍್ನು ಕೊಡುವುದಕ‍್ಕೆ ಒಪ‍್ಪಿದ‍್ದರು
(ಬದುಜ. ೧೪೯);

ಕಂತು2
(ನಾ).
ಹತ‍್ತು ರೂಪಾಯಿಯಂತೆ ಕಂತುಕಟ‍್ಟು
(ಕಾಮಿಕಾ. ೫೨);


logo