logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಡು3
(ನಾ).
ನವೆ; ತೀಟೆ:
“ಮೆಯ‍್ಯ ತಿಮಿರ ಕಂಡೂ ಖರ್ಜುಮೆನಿಸಿಕ‍್ಕು”
(ಮಂಗರಾ. ೧೧೩-೧);

ಕಂಡು3
(ನಾ).
ಆಕೆಯಾ ಕೂಸಿನ ಕಯ‍್ಯ ಪತ‍್ತಿರ್ದ ಕಂಡುಗಳಂ ಕಂಡು ಕರಕಂಡುವೆಂಬ ಪೆಸರನಿಟ‍್ಟು ಸಲಹುತ‍್ತಿರುಲ್
(ಪುಣ‍್ಯಾಸ‍್ರ. ೨-೫೪ ವ).
[ಸಂ.]

ಕಂಡು4
‘ಕಾಣ್’ ಪರಾ.

ಕಂಡುಕ
‘ಖಂಡುಗ’ ನೋ.

ಕಂಡುಕೂರ್
(ನಾ).
ಒಂದು ಊರಿನ ಹೆಸರು:ಅಪರಂ(ರ )
ಅಪರಂ(ರ)ದಿಶಿಕ(ಕೆ?)ಣ‍್ಡುಕೂರ ಗ‍್ರಾಮಸ‍್ಯ ಸೀಮಾವಿಧಿ
(ಇಆ. V, ೫೧-೧೯; ೫ನೆಯ ಶತ).
[? + ಊರ್]

ಕಂಡುಗ
‘ಖಂಡುಗ’ ನೋ.

ಕಂಡುವೋಗು
(ಕ‍್ರಿ).
ತುಂಡುತುಂಡಾಗು:
ಕಂಡುವೋದ ತೊಡೆಯುಂ ಪಿಸುೞ‍್ದ ಕಿೞ್ಪೊಪೂಡೆಯುಂ . . . ಕೋೞ್ಮಿದುಳ ಕೋೞ್ಕಸಱುಮಗುರ್ವುವಡೆಯ
(ಪಂರಾಮಾ. ೧೩-೫೪ ವ).
[ಕಂಡು2 (<ಕಂಡ1) + ಪೋಗು1]

ಕಂಡೂತಿ
(ನಾ).
ತುರಿಸುವುದು; ತುರಿಕೆ; ನವೆ; ತೀಟೆ:
“ಕಂಡೂತಿಃ, ಕಂಡೂಯಾ, ಕಂಡೂಃ, ಕಂಡೂಯನಂ, ಖರ್ಜೂಃ – ಈ 5 ತಿನಸು”
(ಹಲಾಯು. ೯೯-೪೪೯);

ಕಂಡೂತಿ
(ನಾ).
ಶಿರದ ಕಂಡೂತಿಯನು ಕಳೆಯಲ‍್ಕುರಿವ ಕೊಳ‍್ಳಿಯ ಕೊಂಡು ತುರಿಸುವ ಪರಿಯಮಾಡಿದೆ
(ಕೋಗಯ. ೧೫-೨೭).
[ಸಂ.]

ಕಂಡೂಯನ
(ನಾ).
= ಕಂಡೂತಿ:
ವನಕರಿಕಪೋಲ ಕಂಡೂಯನದಿಂದಂ ಪಾಯೆ ಮದಜಲಾಸವರಸ ವಾಸನೆಯಿಂದಿತರ ವನಂಗಳು ಮನುಕರಿಪುವು ಸಪ‍್ತಪರ್ಣಪಾದಪ ವನಮಂ
(ಅಜಿಪು. ೯-೩೧).
[ಸಂ.]


logo