logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಡಿತವಾಚೆ
(ನಾ).
ನೇರವಾದ ಮಾತು; ಸತ‍್ಯವಾದ ಮಾತು; ನಿರ್ಣಾಯಕವಾದ ಮಾತು:
ಇದುವೇ ಕಂಡಿತವಾಚೆ [ಪಾಠಾಂ. ಖಂಡಿತವಾಚ‍್ಯ] ಅಹುದು
(ಜ‍್ಞಾನಸಿಂ. ಕಿ. ೪೨-೧೨).
[< ಸಂ. ಖಂಡಿತವಾಚಾ]

ಕಂಡಿತವಾದಿ
(ನಾ).
ಕಂಡಿತವಾಗಿ ಮಾತನಾಡುವವನು; ಮುಚ‍್ಚು ಮರೆಯಿಲ‍್ಲದೆ ಇದ‍್ದುದನ‍್ನು ಇದ‍್ದಂತೆ ಆಡುವವನು:
ಕಂಡಿತವಾದಿ ಲೋಕವಿರೋಧಿ
(ಗಾದೆ).
[< ಸಂ. ಖಂಡಿತವಾದಿನ್].

ಕಂಡಿದೋರು
(ಕ‍್ರಿ).
(ತಪ‍್ಪಿಸಿಕೊಂಡು ಹೋಗುವ) ಕಿಂಡಿಯನ‍್ನು ತೋರಿಸು:
ಚೋರಗೆ ಕಂಡಿದೋರಿ ವಡೆಯಂಗೆ ದೂರ ಹೇಳುವಾ ಕುಟಿಲ ಚರನಂತಾದೆ
(ನವಮೋ. ೩೦-೪೫).
[ಕಂಡಿ1 + ತೋರು (< ತೋಱ್)]

ಕಂಡಿಬೀೞ್
(ಕ‍್ರಿ).
ರಂಧ‍್ರವಾಗು; ತೂತುಬೀಳು:
ಅನೇಕ ವಿಧದ ಘಾಯ ಗಱಿಗಳಿಂ ಪೊಳಲ‍್ವೋದ ಮೆಯ‍್ಗಳಂ ಕಳಿಯೆ ಪಾಱುವ ಕೈಗಳುಂ ಕಂಡಿಬಿರ್ದ ತೋರ ತೊಡೆಗಳುಂ
(ಮಹಾನೇ. ೧೨-೫೪ ವ).
[ಕಂಡಿ1 + ಬೀೞ್1]

ಕಂಡಿವಲ್
(ನಾ).
ನಡುವೆ ಸಂದಿ ಬಿಟ‍್ಟಿರುವ ಹಲ‍್ಲು; ಒಂದಕ‍್ಕೊಂದು ಹೊಂದದಿರುವ ಹಲ‍್ಲು:
ಮಿಂಚುದಲೆಗಳ ಕಂಡಿ[ಪಾಠಾಂ. ಖಂಡಿ] ವಲ‍್ಗಳ ಸಂಚದವದಿರ ಕುಟಿಲ ಕುಹಕದ ಕುಂಚಿತರ ಹೆದ‍್ಧನಿಗಳಾ ಡೊಳ‍್ಳುಗಳ ಹೇರೊಡಲ ವಂಚಕರ
(ಬಸಪು. ೫೧-೫೪).
[ಕಂಡಿ1 + ಪಲ್]

ಕಂಡಿಸು1
(ಕ‍್ರಿ).
೧. ತುಂಡುಮಾಡು; ಕತ‍್ತಿರಿಸು:
ದುರದೊಳಗಿದಿರಾದ ವೈರಿರಾಯರ ಗರ್ವಗಿರಶಿಖರವ ಕಂಡಿಸುವ ವರವಜ‍್ರದಂಡದಂದದಲಿ ಭೂಪಾಲನ ಸುರುಚಿರ ಖಡ‍್ಗವೊಪ‍್ಪಿದುದು
(ಕಂನವಿ. ೨೨-೯).

ಕಂಡಿಸು1
(ಕ‍್ರಿ).
೨. ಹಾಳುಮಾಡು; ನಾಶಮಾಡು:
ಈ ಧರ್ಮವನು ಕಂಡಿಸದೆ ನಡೆಸಿದಡೆ ತಮ‍್ಮ x x x ಮಾಡಿದ ಧರ್ಮಪಲ
(ಸೌಇಇ. IX-i, ೬೯-೧೮; 11ನೆಯ ಶತ).
[ಕಂಡ1 + -ಇಸು3]

ಕಂಡಿಸು2
(ಕ‍್ರಿ).
ಕೆತ‍್ತು; ಕೊರೆ:
ವಾರಿಕಲ‍್ಲ ಕಡಿದು ಪುತ‍್ಥಳಿಯ ಕಂಡಿಸುವಂತೆ ಉಪ‍್ಪಿನ ಪೊಟ‍್ಟಣವ ಉದಕದಲ‍್ಲಿರಿಸಿದಂತೆ ಕರ್ಪುರದ ಪ‍್ರಣುತೆಯಲ‍್ಲಿ ಜ‍್ಯೋತಿಯ ಬೆಳಗುವಂತೆ ಸಿದ‍್ಧ ಸೋಮನಾಥ ಲಿಂಗವ ವಗ‍್ರಾಹಕ
(ವಚಶಾ. II, ೪೨೮).
[<ಕಂಡರಿಸು?]

ಕಂಡು1
(ನಾ).
ದಾರದ ಉಂಡೆ; ಕಂಡಿಕೆ (ಕಿ).
[ದೇ. || ತಮಿ. ಕಣ‍್ಡು; ತೆಲು. ಕಂಡೆ, ಕಂಡಿಯ].

ಕಂಡು2
‘ಕಂಡ1’ ನೋ.


logo