Kannada Nighantu by Kannada Sahitya Parishattu : Vol-2
ಗೋವಳರು ಬಾಜಿಪ ತಿತ‍್ತಿರಿಯ ಕೊಂಬುಗಳ ಕೊಳಲುಗಳಿತ‍್ತರದ ಕಂಕರಿಯ ಱುಂಚೆಯ ಯೆಕ‍್ಕಮದ‍್ದಳೆಯ ಒತ‍್ತರಿಪ ದನಿಗೇಳುತ ಪುರುಷೋತ‍್ತಮನು ನಂದನುವೆರಸಿ ಬರುತ
ಈತಂ ಪಗಲ‍್ಗಳ‍್ಳನೀತನಂ ಸಮ‍್ಮ ಕಂಕರಿಯಿಂ ಬಡಿವರ್
ಮೆಯ‍್ಯ ಮಸಿ ಕೊರಲ ಬಕ‍್ಕಳೆ ಪೊಯ‍್ಯೆ ಪುಗಿಲ‍್ಗರೆವ ಕೆಯ‍್ಯ ಕಂಕರಿಕೆ ಕರಂ ರಯ‍್ಯಮೆನೆ ಪಾಡುತಿರ್ದಳ್
೧. ಬಾರುಕೋಲು; ಚಾವಟಿಗೋಲು; ಉದ‍್ದವಾದ ಚಾಟಿ (ಕಿ).
೨. (ಅಸ‍್ಪೃಶ‍್ಯತನದ ಸಂಕೇತವಾಗಿ ಚಂಡಾಲನು ಕೈಯಲ‍್ಲಿ ಹಿಡಿದುಕೊಳ‍್ಳುವ) ದೊಣ‍್ಣೆ:
ಇಂದುಧರನೊಂದುವೇಷಂಬೊತ‍್ತು ಬರುತಿರಲ್ ಪೆಗಲ ಮಿಣಿ ಕಯ‍್ಯ ಕಂಕರಿಗೋಲಿನೀಶ‍್ವರಂ ಸೊಗಯಿಪ ವಿಭೂತಿ ರುದ‍್ರಾಕ‍್ಷೆಯ ಕೃಪಾಕರಂ
ಪಿಡಿದ ಕಂಕರಿಗೋಲಿನಿಂದೆ ತನ‍್ನಂಗದೊಳ್ ಪೊರೆದ ಮಣ‍್ಣಂ ಪರುಷಮಂ ಮಾಡಿ
೨. ಮಿಣಿ ಕಂಕರಿಗೋಲ ಹಿಡಿದು ಬಪ‍್ಪುದು ಜಂಗಮಸ‍್ಥಲವೇ
ನಸುಕುಸಿದ ದೇಹ ಕಂಕರಿಗೋಲನಿಱಿದು ಬಾರಿಸುತ ಕೈವಿಡದೆ ಸಂಬಳಿ ಸಂಬಳೆಂದೆಂದು ಕೊಸರುತಿಹ ಬಾಯ‍್ವೆರಸಿ ಬೀದಿಬೀದಿಯೊಳು ಸುಳಿದಂ