logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿಮಿಸರಟ
(ನಾ).
"ಪಳೆಯುಳಿಕೆಯಾಗಿ ದೊರೆಯುವ ಹಲ್ಲಿಯ ವರ್ಗದ (ಪ್ರಾಣಿ): ತಿಮಿಸರಟ"
(Ceteosaur. ಇಂಕನಿ).
[ತಿಮಿ + ಸರಟ]

(Ceteosaur. ಇಂಕನಿ).

[ತಿಮಿ + ಸರಟ]

">

ತಿಮಿಳ
ತಿಮುೞ, ತಿವುಳ
(ನಾ).
ತಮಿಳ; ಅರವ. 'ತಿಮಿಳವಡೆ’ ಪರಾ.

ತಿಮಿಳ
ತಿಮುೞ:
ತಿಮುೞನಾಡು’ ಪರಾ.

ತಿಮಿಳ
ತಿವುಳ:
ಸಾಮನ್ತ ಗರುಡಂ ತಿವುಳಬಳಜಳಧಿಮಥನಮನ್ಥನೋದ್ಭವ ಜಯಾಂಗನಾಲಿಂಗಿತ ವಿಶಾಳಭುಜದಣ್ಡಂ
(ಎಕ. VII, ಶಿಕಾರಿ. ೩೦-೧೬; 1081);

ತಿಮಿಳ
ಏಗೊಳಿಸಿ ತಿವುಳನಂ ಗಂಡುದೊತ್ತಾಳ್ದನ್
(ಮೈಆರಿ. ೧೯೨೯, ೬೫-೧೮; 1081);

ತಿಮಿಳ
ತಿವುಳದೇಶದವರೆಲ್ಲರುಮಂ ಕಾಣಲಾಗದು
(ಧರ್ಮಾಮೃ. ೯-೮೯);

ತಿಮಿಳ
ಇವನು ಕನ್ನಡಿಗನವನು ಕೇರಳನಂ ಮತ್ತಿವನು ಕೊಂಕಣನಿವ ತಿವುಳ
(ನೇಮಿಸಂ. ೨೩-೨೫೬).
[<ತಮಿಳ]

ತಿಮಿಳವಡೆ
(ನಾ).
ತಮಿಳರ ಸೈನ್ಯ:
ಪಾಂಡ್ಯಾದಿಗಳು ಕಾದಿ ಗೆಲ್ದಂ ನರಸಿಂಹ್ವಂ ಚೂಣಿಯಾಳೊಳಾ ತಿಮಿಳವಡೆ ಪಡಲ್ವಟ್ಟಡಳ್ಳಾಡೆ
(ಎಕ. XVI, ಚಿಕ್ಕನಾ. ೭೦-೬; 1235).
[ತಿಮಿಳ + ಪಡೆ2]

ತಿಮೀನ
(ನಾ).
೧. ದೊಡ್ಡ ತಿಮಿಂಗಲ.

ತಿಮೀನ
೨. [ಜ್ಯೋತಿ] ಒಂದು ನಕ್ಷತ್ರ ರಾಶಿ; ಮತ್ಸ್ಯರಾಶಿ; ಮೀನರಾಶಿ. ೧, ೨:
ದ್ರೋಣಂ ತಿಮೀನಂಗಳಿಂದೊಪ್ಪುತಕಳಂಕಮೆನೆ ಧನುಷ್ಕೋಟಿಯಿಂ ಬೆರೆದತುಳವೃಷಕೆ ನೆಲೆವನೆಯಿದೆನಿಸಿ
(ಶ್ರೀರಾಮ. ೩-೨೯).
[ತಿಮಿ + ಇನ2]


logo