logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಡಾಳು
(ನಾ).
ಒಂದು ಔಷಧಿ ಸಸ‍್ಯ:
ಕಂಡಾಳು, ಕಾಡುಬೆಣ‍್ಣೆ ಬಿದಿರುಸೊಪ‍್ಪು
(ಮೈಔಗಿ. ೨೪-೪೩೯).
[?]

ಕಂಡಿ1
ಖಂಡಿ1
(ನಾ).
೧. ಕಿಂಡಿ; ರಂಧ‍್ರ:
ಎಸೆವಂಬುಗಂಡಿ ಪೆಟಲ ಕಂಡಿ ಸುಭಟರು ಮುಸುಕಿ ಹೊಯ‍್ದಾಡುವ ಕಂಡಿ
(ಕುರಾಸಾಂ. ೩೭-೫೨);

ಕಂಡಿ1
(ನಾ).
ಪ‍್ರಕಾಶನವು ಬೆಳಕಿನ ಕಂಡಿ, ಕಾಲ ಮತ‍್ತು ಹಿಂದಿರಿಸಿದ ರಾಸಾಯನಿಕ ಪ‍್ಲೇಟ್ ಇಲ‍್ಲವೆ ಪಟಲ [Film) ಇದರ ಸೂಕ‍್ಷ‍್ಮತೆ ಇವುಗಳನ‍್ನು ಹೊಂದಿದೆ
(ಬಾಲಪ‍್ರ. II, ೯೫೪).

ಕಂಡಿ1
(ನಾ).
೨. ರಹಸ‍್ಯ; ಮರ್ಮ:
ಕಂಡನಾತನ ಕಪಟವೇಷದ ಕಂಡಿಯನು ನೆಱೆ ನೋಡಿ ಭಾವಿಸಿ ದಂಡನಾಯಕ ಬಳಿಕ ನಿಶ‍್ಚಯಿಸಿದನು ಗುರುವೆಂದು
(ಪ‍್ರಭುಲೀ. ೨೨-೩೮).

ಕಂಡಿ1
(ನಾ).
೩. ಮೃಗಗಳು ಕಾಡಿನಿಂದ ಕಾಡಿಗೆ ಹೋಗುವ ಅಥವಾ ಬರುವ ಸ‍್ಥಳ, —ಎಡೆ:
ಮೃಗಮಂ ಗಾಳಿಯನಿರ್ಕೆಯಂ ಪಕ‍್ಕೆಯಂ ಗಣಿದಮಂ ಕಂಡಿಯಂ ಮಾರ್ಕಂಡಿಯಂ ಪುಗಿಲಂ ಪೋಗಂ
(ಪಂಪಭಾ. ೫-೪೩);

ಕಂಡಿ1
(ನಾ).
ನಾಯ ಬಾಯ ಮೊಲನಂ ಕೈಗುತ‍್ತಿ ಕೊಲ್ ಕಂಡಿಯೊಳ್ ಕೆಡೆ ಕುತ‍್ತೆೞ್ಬಸು ಮೇಲೆ ಪಾಯ‍್ವ ಪುಲಿಯಂ
(ಸೂಕ‍್ತಿಸು. ೩-೧೧೫);

ಕಂಡಿ1
(ನಾ).
ಬಿಲ‍್ಲಿನವರು ಜೀವಾದಿಗಳು ಆ ಕಾಡಿನಿಂದ ಇನ‍್ನೊಂದು ಕಾಡಿಗೆ ಓಡುವ ಜಾಗಗಳನ‍್ನು . . . ತಮ‍್ಮ ಪರಿಭಾಷೆಯಲ‍್ಲಿ “ಕಂಡಿ” ಎಂದು ಕರೆಯುತ‍್ತಾರೆ
(ಮಲೆಚಿ. ೫).

ಕಂಡಿ1
(ನಾ).
೪. ಗುಪ‍್ತದ‍್ವಾರ:
ಭಂಡನ ಕಂಡರೆ ಕಂಡೀಲಿ ಆದರೂ ಹೋಗಬೇಕು
(ರೂಢಿ).

ಕಂಡಿ1
(ನಾ).
ಖಂಡಿ1:
೧. ಕರುಳ್‍ಸೂಸಿದೊಡಂ ಖಂಡಿಯ ಬಾಯಿಂ ತೊಲಗದೆ ಕಂಡರ್ ಕಂಟಳಿಸೆ ಕಾದಿದರ್
(ಪಾರ್ಶ್ವಪು. ೩-೧೫೧);

ಕಂಡಿ1
(ನಾ).
ಸುಪ‍್ರಚಂಡನೆಂಬುದೂ ಕಂಡಿತೀಗ ಮಯ‍್ಯೊಳಿರುವ ಖಂಡಿ ಪೇಳ‍್ವುದೂ
(ರಾವಣೋ. ೮).


logo