logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಡವಡ
(ನಾ).
ಕಂಡಪಟ:
“ಕಾಂಡಪಟ – ಕಂಡಪಟ”
(ಶಮದ. ೨೭೦ ಪ‍್ರಯೋ);

ಕಂಡವಡ
(ನಾ).
ಅಮರೆ ಮಾಡಿದ ಬಿಟ‍್ಟುಳಿಯ ಕಕ‍್ಕುಂಬ ತೊಡಂಬೆಯ ಮೂಡಿಗೆಯ ಕದಳಿಕೆಯ ಕಂಡಪಟಂಗಳುಮಂ
(ಪಂಪಭಾ. ೫-೪೭ ವ).
[<ಸಂ. ಕಾಂಡಪಟ. / ತೆಲು. ಕಂಡವಡ]

ಕಂಡವಿಡು
(ಕ‍್ರಿ).
ಪುಷ‍್ಟವಾಗು; ಮಾಂಸಖಂಡಗಳು ತುಂಬಿಕೊಂಡು ದಪ‍್ಪವಾಗು (ಕಿ).
[ಕಂಡ1 + ಇಡು1. / ತೆಲು. ಕಂಡಪಟ‍್ಟು].

ಕಂಡಸಕ‍್ಕರ್
(ನಾ).
ಒಂದು ಮನೆತನದ ಅಥವಾ ಒಬ‍್ಬಾತನ ಹೆಸರು (?):
ಮಿದೆಲೆಯ ಕದುಯ‍್ಯ ಭರತಯ‍್ಯ ದಿಟ‍್ಟಿಯಮ‍್ಮ ಅಮ‍್ಮಣ ಬೇಯವರು ಕಂಡಸಕ‍್ಕರ ಕಸವಣ‍್ನ ಕುಣ‍್ಟನಗಮ‍್ಮ ದುಗ‍್ಗಯ‍್ಯ ಇನ‍್ತಿನಿಬರಾ ದತ‍್ತಿ
(ಎಕ. XVI, ತುಮಕೂ, ೮೧-೧೫; 903).
[?]

ಕಂಡಸಕ‍್ಕರೆ
ಖಂಡಸಕ‍್ಕರೆ
(ನಾ).
ಕಲ‍್ಲುಸಕ‍್ಕರೆ:
ಅಮೃತದ ಕಂಡಸಕ‍್ಕರೆಯ ಕೂಟಮುಮೊಲ‍್ವಳ ಕೂಟಮುಂ ಸಮಾನಮೆ ವಲಂ
(ಕಾವ‍್ಯಾವ. ೧೪೪).

ಕಂಡಸಕ‍್ಕರೆ
(ನಾ).
ಖಂಡಸಕ‍್ಕರೆ:
ಖಂಡಸಕ‍್ಕರೆ ಚಿಲುಪಾಲು ಗಾರಿಗೆ ವಡೆ ಮಂಡಿಗೆ ಕಜ‍್ಜಾಯಗಳ ತಂಡತಂಡದೆ ರಾಸಿಗೈದು ನೈವೇದ‍್ಯವ ಚಂಡಿಕಾಂಬಿಕೆಗರ್ಪಿಸಿದರು
(ಕಂನವಿ. ೨೨-೨೮).
[< ಸಂ. ಖಂಡಶರ್ಕರಾ]

ಕಂಡಸಿ
(ನಾ).
ಒಂದು ಬಗೆಯ ಸಸ‍್ಯ:
ಬೆಲ‍್ಲವತ‍್ತಂ ಬೇವು ಬಿಕ‍್ಕೆ ಕಂಡಸಿ ತಪಸಿ
(ಸಿದ‍್ಧಕಾ. ೬-೧೭);

ಕಂಡಸಿ
(ನಾ).
ಕಂಡಸಿ ಸೊಪ‍್ಪಂ ಅರೆದು ಮೊಸರಲ‍್ಲಿ ತೆಗೆದುಕೊಳ‍್ಳಲು ಮೋಹ ಗುಣ
(ವಿವೈವಿ. ೪).
[?]

ಕಂಡಳಿ
(ನಾ).
ಅಯ‍್ಯಾವೊಳೆ ಐನೂರ್ವರ ಒಂದು ಬಿರುದು; ಒಂದು ವಂಶದ ಹೆಸರು (?):
ಲಕ‍್ಷ‍್ಮೀವಕ‍್ಷಸ‍್ಥಳಂ ಸರಾಳಿಂಗಿತ ಭುವನಪರಾಕ‍್ಕ‍್ರಮಂ ವಾಸುದೇವ ಕಣ‍್ಡಳಿ ಮೂಳಭದ‍್ರೋದ‍್ಭವ[ಂ] ಭಗವತೀ ವರಪ‍್ಪ‍್ರಸಾದಂ
(ಕಇ. IV, ೫೫-೬; ೧೦೦೦)

ಕಂಡಳಿ
(ನಾ).
ಜಯವಧೂ ಲೋಲರ್ ಕಣ‍್ಡಳೀಮೂಳಭದ‍್ರೋದ‍್ಭವ ವೀರಾವತಾರರೇಕೈಕವೀರರ್
(ಸೌಇಇ. IX-i, ೧೦೧-೧೯; 1045).
[?]


logo