logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಡಬಟ‍್ಟೆ
‘ಕಂಡಾಬಟ‍್ಟೆ’ ನೋ.

ಕಂಡಭೂಮಿ
(ನಾ).
ಗದ‍್ದೆಯ ಭಾಗ; ಭೂಮಿಯ ಭಾಗ:
ಮತ‍್ತಮಾ ಪ‍್ರಭುಗಳ‍್ಗೆ ಅಳದು ಕಣ‍್ಡಭೂಮಿಗೆ ನೂಱಕ‍್ಕೆ ಹತ‍್ತಱೋಪಾದಿಯ ದಶವನ‍್ಧಮನಿಕ‍್ಕಿ
(ಎಇ. XVI, ೪೮-೫೨; 1147).
[ಕಂಡ1 + ಭೂಮಿ]

ಕಂಡಮಂಡಲ
(ನಾ).
ಅಲ‍್ಲಲ‍್ಲೇ ಹರುಕುಮುರುಕಾಗಿ ಬೀಳುವ ಮಳೆ; ಖಂಡವೃಷ‍್ಟಿ (?):
ಅಲ‍್ಲಿಂದ ಮೂಱುವರ್ಷ ಮಳೆ ಬೆಳೆ ಕಂಡಮಂಡಲವಾದದ‍್ದೆ ಕುಱುಹು
(ಕಾಲಸಂ. ೮೯-೧೧);

ಕಂಡಮಂಡಲ
(ನಾ).
ಮೂರು ಆರು ಉಳಿದರೇ ಕಂಡಮಂಡಲ ಬಾಗಿ ಹರಿದರೆ ದುರ್ಭಿಕ‍್ಷ ತಪ‍್ಪದೂ
(ಮನೆಲ. ೧೮-೩).
[?]

ಕಂಡಮ‍್ಮಯ‍್ಯ
(ನಾ).
ಒಬ‍್ಬಾತನ ಹೆಸರು:
ಮರಂಗಲ‍್ಲೊಡೆಯ ಕಣ‍್ಡಮ‍್ಮಯ‍್ಯನಾ ಮಗನ್ ವಿಲಗಣ‍್ಡಯ‍್ಯನು
(ಎಕ. X, ಬೌರಿಂಗ್. ೬೪-೫; 900).
[ಕಂಡ0 + ಅಮ‍್ಮ1 + ಅಯ‍್ಯ1]

ಕಂಡರಣೆ
(ನಾ).
ಕಡೆಯುವಿಕೆ; ಕೊರೆಯುವಿಕೆ; ಕಲ‍್ಲು, ಲೋಹ ಮೊದಲಾದವುಗಳಲ‍್ಲಿ ಕೊರೆಯುವಿಕೆ:
ಸೂಣ‍್ಡಿಯ ಸೋವೋಜನ ಕಣ‍್ಡರಣೆ ಮಙ‍್ಗಳಂ
(ಸೌಇಇ. XI-i, ೮೪-೪೦; 1049);

ಕಂಡರಣೆ
(ನಾ).
ಕಲ‍್ವೆಸದೋಜೆಗೆ ನಚ‍್ಚಿನಚ‍್ಚು ಕಂಡರಣೆಗೆ ಮಂಡನಂ ಮರವೆಸಕ‍್ಕೆಱೆವಟ‍್ಟು
(ಮಲ‍್ಲಿಪು. ೨-೭೬);

ಕಂಡರಣೆ
(ನಾ).
ಪೊಂಬೊಳಲ ಮಾರೆಯಭಟ‍್ಟರ ಬರೆಪ ರೂವಾರಿ ಸೊಸೆನೋ ಝನ ಕಣ‍್ಡರಣೆ
(ಸೌಇಇ. xv, ೨೨-೧೦೧; 1142);

ಕಂಡರಣೆ
(ನಾ).
ಕಡಪದ ಕಂಡರಣೆಯ ಬೇಗಡವೆಸೆದ ವಿಚಿತ‍್ರಮಪ‍್ಪ ಕೆಲಸದ ಗತಿಯಂ ನಡೆನೋಡಿ
(ಬಾಧಪು. ೧-೧೫೭);

ಕಂಡರಣೆ
(ನಾ).
ಯಾವ ಚಕ‍್ರವರ್ತಿಯ ವಿವಾಹಮಂಟಪ ಈ ತೆರನಾದ ಕಂಡರಣೆಯ ಕೌಶಲವನ‍್ನು ತೋರಿಸಬಲ‍್ಲುದು!
(ಪಂಯಾತ‍್ರೆ. ೨೫).
[?]


logo