logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಡಗೆ
‘ಖಂಡುಗ’ ನೋ.

ಕಂಡಣಿಸು
‘ಕಂಡರಿಸು’ ನೋ.

ಕಂಡಣೆ
ಕಂಡನೆ
(ನಾ).
ಅಂತಿಮ ತೀರ್ಮಾನ; ಒಪ‍್ಪಂದ (ಕಿ).

ಕಂಡಣೆ
(ನಾ).
ಕಂಡನೆ:
(ಕಿ).

ಕಂಡಣೆ
(ನಾ).
ಕಂಡಣೆಪತ‍್ರ = ಕರಾರುಪತ‍್ರ;
ಒಪ‍್ಪಂದದ ಕಾಗದ
(ಕಿ).

ಕಂಡಣೆ
(ನಾ).
ಕಂಡಣೆ ಹಣ = ನಿಗದಿಯಾದ ಹಣ
(ಕಿ).
[<ಸಂ. ಖಂಡನ]

ಕಂಡನಿ
(ನಾ).
೧. ಒರಳು. ೨. ಒನಕೆ:
ಚುಲ‍್ಲಿ ಪೇಷಣಿ ಕಂಡನಿ ಉಪಸ‍್ಕರ ಉದಕುಂಭ ಎಂಬೈದು ಗೃಹೋಪಕರಣಗಳೂ ಹತ‍್ಯಾಕಾರಕಗಳು
(ಆರ್ಯಧ. ೧೮೭).
[ಸಂ. ಕಂಡನೀ].

ಕಂಡನೆ
‘ಕಂಡಣೆ’ ನೋ.

ಕಂಡಪಟ
‘ಕಂಡವಡ’ ನೋ.

ಕಂಡಪಿಳ‍್ಳೆ
(ನಾ).
“ಗರ್ಭದೊಳಗಿನ ಕೂಸು, ಮಾಂಸದ ಪಿಂಡ” (ಮೋಳಿಮಾ. ಕೋಶ):
ಐಕ‍್ಯನಾದಲ‍್ಲಿ ಕಂಡಪಿಳ‍್ಳೆಯಂತಿರಬೇಕು
(ಮೋಳಿಮಾ. ೧೪೩-೫೧೮).
[ಕಂಡ? + ಪಿಳ‍್ಳೆ]


logo