Kannada Nighantu by Kannada Sahitya Parishattu : Vol-2
೩. “ಹಾದಿಗೂ ರಸ‍್ತೆಗೂ ಹೆಚ‍್ಚಾಗಿ ಉಪಯೋಗಿಸುವ ದಪ‍್ಪಮರಳಿನ ಮತ‍್ತು ಸಣ‍್ಣಕಲ‍್ಲಿನ ಉಂಡೆಗಳ ಮಿಶ‍್ರಣ: “ಗರಸು” (Gravel. ಇಂಕನಿ).
೨. ಸುರಭಿ ಚಿಂತಾಮಣಿ ಸಂತಾನಂಗಳಿರೆ ಬಱಡು ಕಂಖರಗಳನಾರೈವ ಮರುಳನಂದದೆ ನಿಮ‍್ಮ ಪದಮಿರೆ ಸಂಸಾರಶರಧಿಯೊಳಾಳ‍್ದಿರ್ದೆಯೆಲೆ ದೇವ
[ಪ‍್ರಾ. ಕಕ‍್ಕರ (< ಸಂ. ಕರ್ಕರ). / ಹಿಂ. ಕಂಕಡ, ಕಂಕರ]
೨. ನೀರುಮಜ‍್ಜಿಗೆ. ೩. ಅತ‍್ಯಧಿಕ ಸಂಖ‍್ಯೆ (ಒಂದು ನೂರು ನಿಯುತದಷ‍್ಟು).
ಹುಲ‍್ಲಿಲ‍್ಲದ ಕಂಕರಕಲ‍್ಲುನೆಲದ ಮೇಲೆ ಕುಳಿತು, ಬಿ ಸಿ ಲ ಝಳದಲ‍್ಲಿ . . . ಒಂದು ವೀರರಸಾತ‍್ಮಕಕಾವ‍್ಯವನ‍್ನು ಬರೆದೆ
ಕರಿ ಹಯವು ಕಾಲಾಳು ಕಂಕರಗರೆವುತೇಕಾಕ‍್ಷೋಹಿಣಿಯು ಬರುತುರುಸರಳಮಾಲೆಯನು ಕೆದರಿದರರಿದು ಮುಳಿಸಿಂದ
ಕಂಕರಿಯ ಸಿವಿಱ ಪೆಂಪಿನ ಝಂಕಟ ಬೊಂಬುೞಿಯ ಪೞವದುಳಿಕೆಯ ಢಕ‍್ಕಾಸಂಕುಳದ ತಾಳದುಲಿನೆಗೞ್ದೀಂ ಕರ್ಣಾಮೃತ ಸಮುದ‍್ರಘೂರ್ಣನಮಾಯ‍್ತೊ
ಕಂಕರಿಯ ದನಿಗೆ ಕುಣಿಯನೇ ಸರ್ವೇಶ‍್ವರಂ