Kannada Nighantu by Kannada Sahitya Parishattu : Vol-2
ಕಂಠೀರವಗುಳಿಗೆ = ಕಂಠೀರವರಾಯನ ವರಹ:
೨೦ ಮಟ‍್ಟನ ಕುರುಚಿಗ‍್ರಾಮದಲ‍್ಲಿ ಹೊಲ ಗು ೭ ಉಭಯಂ ಕಂಠೀರವಗುಳಿಗೆ ಇಪ‍್ಪತ‍್ತೇಳು ವರಹದ ಹುಟ‍್ಟುವಳಿ
(ಎಕ. IX, ನೆಲಮಂ. ೮-೧೧; 1763).
ಸಿಂಹದ ನಡುವಿನಂತೆ ತೆಳುವಾದ ನಡುವುಳ‍್ಳವಳು:
ವರ ಕಂಠೀರವಮಧ‍್ಯೆ ಮೀನ ನಯನಾಂಬೋಜಾಸ‍್ಯೆ ಬಾಲೇಂದು ಸೌಂದರ ಫಾಲಾಳಿ ಸುಕೇಶಿ
[ಸಂ. ಕಂಠೀರವಮಧ‍್ಯಾ (ಕಂಠೀರವ + ಮಧ‍್ಯ + -)]
ಸಿಂಹವನ‍್ನೇ ವಾಹನವಾಗಿ ಉಳ‍್ಳವಳು; ದುರ್ಗೆ:
ಕೂರಸಿಯೊಳ್ ನೆಲಸುಗೆ ಕಂಠೀರವವಾಹನೆ ಚಳುಕ‍್ಯ ಕಂಠೀರವನಾ
[ಸಂ. ಕಂಠೀರವವಾಹನಾ (ಕಂಠೀರವ + ವಾಹನ + -)]
ಸೌಂದರಾನೇಕಮಣೀ ರುಚಿ ಜಳಸ‍್ಯಂದಿಯಂ ಮಂದರೋತ‍್ತುಂಗ ಕಂಠೀರವಾಸಂದಿಯಂ [ಪಾಠಾಂ. ಕಂಠೀರವಸ‍್ಯಂದಿಯಂ]
ಹದಿನೆಂಟು ಬಗೆಯ ವರಹ ನಾಣ‍್ಯಗಳಲ‍್ಲಿ ಒಂದು:
೧೭ ಕಂಠೀರಾಯಿ ಕಿಮ‍್ಮತ‍್ತು ರೂ. ೩ ಆ. ೪
ಹತ‍್ತು ಹಣಕ‍್ಕೆ ಕಂಠೀರಾಯಿ ಒಂದು ವರಹ
ಸಾಗುವಳಿ ಮಾಡಿದ ಕೊಪ‍್ಪಲ ಭೂಮಿಯಂನ‍್ನು ಕಂಟಿರಾಯಿ ಗು ೫
(ಮೈಆರಿ. ೧೯೨೯, ೯೪-೩೨; 1813).
ಕಂಠಿರಾಯಪಗೋಡ, ಕಂಠಿರಾಯಿಹಣ, ಕಂಠೀರಾಯಿವರಹ = ಕಂಠೀರಾಯಿ: (ಮೈಗೆಜೆ. IV, ೭೬೬);
ಎರಡು ಕಂಠಿರಾಯಿಹಣವನ‍್ನು ಕೊಟ‍್ಟು ಮತ‍್ತೊಂದು ಹಾರವನ‍್ನು ತೆಗೆದುಕೊಂಡು ಅದನ‍್ನು ಪಾರು ಪತ‍್ತೆಗಾರನ ಕೈಗೆ ಕೊಟ‍್ಟೆ
ಆ ಕಾಲದಲ‍್ಲಿ ಠರಾವಾದ ಹುಟ‍್ಟುವಳಿಯ ಅಂದಾಜು ಕಂಠೀರಾಯಿವರಹ