Kannada Nighantu by Kannada Sahitya Parishattu : Vol-2
ಆ ತ‍್ರೈಭುವನ ಕಾಂ[ತೆಗಂ]ದಲ್ ಕಂಠಾಭರಣಮೆನೆ ಪರೆದ ತನ‍್ನಧ‍್ವರ ಧೂಮದೆ ಕರಿದು ಮಾಡಿದಂ ನಿಜಯಶಮಂ
ಅವಳ ಕೊರಳಲ‍್ಲಿದ‍್ದ ಕಂಠಾಭರಣವನ‍್ನೂ . . . ಅರಸನ ಮುಂದಿಟ‍್ಟನು
೧. ಕಂಠ; ಗಂಟಲು. ೨. ಕೊರಳಲ‍್ಲಿ ಧರಿಸುವ ಸರ:
“ಉರಸ‍್ಸೂತ‍್ರಿಕೆ-ಹೊಕ‍್ಕುಳದ ತನಕ ಜೋತಾಡುವ ಮುತ‍್ತಿನ ಕಂಠಿ”
ಲುಳಿದಾರ ಮುಂಗೆಯ‍್ಯ ಮುರಿ ಪೆಂಡೆಯ ತೋಳ ಬಳೆ ಕಂಠಿ [ಪಾಠಾಂ. ಕಂಟಿ] ಕಡೆಯ ಕಡುಕಿನಾ ಬಲುರಾಸಿ
“. . . ಅವನ ಕೊರಳಿಗೆ ಹಾಕಿದ ಕಂಠಿಯ ಮೇಲೆ ಕೈಯಾಡಿಸುತ‍್ತಿದ‍್ದ”
೩. ಕುದುರೆಯ ಕತ‍್ತಿಗೆ ಕಟ‍್ಟುವ ಹಗ‍್ಗ.
ಯುವರಾಜ ಕಂಠಿಕಾಬಂಧವಂ . . . ನೃಪಂ ನಿರ್ಮಿಸಿದಂ
ಒಂದು ಸಮುದ‍್ರಪ‍್ರಾಣಿಯ ಒಳಚಿಪ‍್ಪು; ಸಮುದ‍್ರದ ನೊರೆ:
“ಕಫಂ – ಕಡಲನಾಲಗೆ, ಕಂಠಿಕಾಳಾಯಿ”
ಒಂಟೆಳೆಯ ಮುತ‍್ತಿನ ಹಾರ; ಏಕಾವಳಿ:
“ಒಂದು ಸರಮಾಗಿರ್ದ ಹಾರಮೇಕಾವಳಿಯು ಕಂಠಿಕೆಯೆನಿಕ‍್ಕು”
ಕಪ‍್ಪುರದ ಕಂಠಿಕೆ ಬಣ‍್ಣದ ಸಣ‍್ಣಮಾಲೆ ತೆಂಗಿನ ತಿರುಳೋಲೆ