logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಠಶುದ‍್ಧಿ
(ನಾ).
ಕಂಠಶುದ‍್ಧವಾಗಿರುವಿಕೆ; ಧ‍್ವನಿಯ ಸ‍್ಪಷ‍್ಟತೆ:
ಇದರಿಂ ಖಾಸ, ಶ‍್ವಾಸ . . . ಕ‍್ರಿಮಿರೋಗ ಸಹ ಪರಿಹಾರವಹುದು. ಶರೀರಕಾಂತಿ, ಕಂಠಶುದ‍್ಧಿ, ಅಗ‍್ನಿಪಟುತ‍್ವ, ಧಾತುವೃದ‍್ಧಿ ಸಹ ಉಂಟಾಗುವುದು
(ಸಕವೈ. ೨೧೮).
[ಕಂಠ + ಶುದ‍್ಧಿ]

ಕಂಠಶೋಷ
(ನಾ).
೧. ಕೂಗಾಡಿ ಗಂಟಲು ಒಣಗಿಸಿಕೊಳ‍್ಳುವುದು. ೨. (ಆಲಂ) ಫಲವಿಲ‍್ಲದೆ ಮಾತಾಡುವಿಕೆ:
“ಮನೆಯಲ‍್ಲಿ ಕಿರಿಯರ ಮುಂದೆ ಇವನು ಹಗಲೆಲ‍್ಲ ಕಂಠಶೋಷ ಮಾಡಿಕೊಳ‍್ಳುತ‍್ತಿದ‍್ದದ್ದು ಒಂದನ‍್ನೇ ಹೇಳಿ - “ಮನೆತನದ ಹೆಸರನ‍್ನು ಕೆಡಿಸಬೇಡಿರೋ” . . . ಎಂದು ತೊಳಲಾಡಬೇಕು
(ಮೂರುದಾ. ೫೭).
[ಕಂಠ + ಶೋಷ]

ಕಂಠಶೋಷಣೆ
(ನಾ).
= ಕಂಠಶೋಷ ೧:
ಕಪ‍್ಪು ಬಣ‍್ಣದ ವೈಶ‍್ಯನೊಬ‍್ಬ ದೊಡ‍್ಡದನಿಯಲ‍್ಲಿ ಕಂಠಶೋಷಣೆ ನಡೆಸಿದ‍್ದ
(ಹೊಸಕ‍್ಷಿ. ೧೮೩).
[ಕಂಠ + ಶೋಷಣೆ]

ಕಂಠಶ‍್ರೀ
(ನಾ).
ಧ‍್ವನಿಯ ಸಂಪತ‍್ತು; ಉತ‍್ತಮವಾದ ಶಾರೀರ:
“ಶ‍್ರೀಕಂಠಯ‍್ಯನವರ ‘ಕಂಠಶ‍್ರೀ’ ಇತರರಿಗಿಲ‍್ಲ”
(ಕಒಸಾ. XIV, ಪೀಠಿಕೆ);

ಕಂಠಶ‍್ರೀ
(ನಾ).
ಕೃಷ‍್ಣಯ‍್ಯರ್ ಅವರಿಗೆ . . . ಮಂದರಶ‍್ರುತಿಯಲ‍್ಲಿ ಹಾಡಬಲ‍್ಲ ಕಂಠಶ‍್ರೀ ಇತ‍್ತು
(ಸಂಗೀತ. ೪೦).
[ಕಂಠ + ಶ‍್ರೀ]

ಕಂಠಸೂತ‍್ರ
(ನಾ).
೧. ಹೆಂಗಸರು ಕೊರಳಲ‍್ಲಿ ಧರಿಸುವ ಸರ:
ಈ ಕಂಠಸೂತ‍್ರಮೀ ಕರ್ಣತಾಟಂಕಮೀ ಶ‍್ರೀಕರಂ ನಿಜಜನನಿಗೇಕೆಂದು ಬಿಡಿಸಿದೈ ಸಾಕಿನ‍್ನು
(ಜೈಮಿಭಾ. ೨೩-೫೫).

ಕಂಠಸೂತ‍್ರ
(ನಾ).
೨. ಯಜ‍್ಞಸೂತ‍್ರ (ಕಿ).

ಕಂಠಸೂತ‍್ರ
(ನಾ).
೩. [ಕಾಮಶಾ] ಆಲಿಂಗನದ ಒಂದು ಪ‍್ರಕಾರ.
[ಕಂಠ + ಸೂತ‍್ರ]

ಕಂಠಸ‍್ಥ
(ಗು).
೧. ಕೊರಳಲ‍್ಲಿರುವ:
ಕಂಠಸ‍್ಥ ನಕ‍್ಷತ‍್ರಮಾಲೆಯಿಂ . . . ಉದ‍್ಭಾಸಿಸಿದಂ ಸ‍್ವಯಂವರದೊಳ್
(ಶಾಂತಿಪು. ೫-೧೬೧).

ಕಂಠಸ‍್ಥ
(ನಾ).
೨. (ಆಲಂ) ಬಾಯಿಪಾಠ; ಕಂಠಪಾಠ; ಗಟ‍್ಟಿಮಾಡುವಿಕೆ:
ವ‍್ಯಾಖ‍್ಯಾನಕಾರನು ಈ ಪದ‍್ಯಗಳನ‍್ನು ಕೊಟ‍್ಟು ಭಾಷಾಭ‍್ಯಾಸಿಗಳಿಗೆ ಕಂಠಸ‍್ಥ ಮಾಡಿಕೊಳ‍್ಳಲು ಅನುಕೂಲ ಮಾಡಿಕೊಟ‍್ಟಿದ‍್ದಾನೆ
(ಶಮಪಾಂ. ೫೭).
[ಸಂ.]


logo