Kannada Nighantu by Kannada Sahitya Parishattu : Vol-2
ಕಂಠಮಾಲೆ ೧ ಕೆ ಮುತ‍್ತು ೨೦ ಮಾಣಿಕ ೧೮ ನೀಲ ೨ ತುಂಬಿದ ಕುಸುರಿ ೩೮
(ಸೌಇಇ. IX-ii, ೪೮೭-೩; 1513);
ಹೊಳೆವ ವಜ‍್ರದ ಕಂಠಮಾಲೆ ಮಾಣಿಕ‍್ಯದ ಸುಲಲಿತ ಕಂಠಮಾಲೆಗಳ . . . ಸಲೆ ಧರಿಸಿದಳು
ಶಕುನಿರವಕ‍್ಕೆ ಕಂಠರುತಿ ಕೂಟದೊಡಂಬಡಿನೊಳ್ ನಿಮಿರ್ಚೆ ಗಾಯಕತೆಯಂ
೧. ಕೊರಳಿಗೆ ಅಂಟಿಕೊಂಡ, __ಅಪ‍್ಪಿಕೊಂಡ.
೨. ಕೊರಳನ‍್ನು ಅಪ‍್ಪಿಕೊಂಡವಳು; ಪ‍್ರೇಯಸಿ:
ಅವಳು ‘ಆನಂದದಿಂದ ಔರಂಗಜೇಬನ ಕಂಠಲಗ‍್ನಳಾದಳು’
ಕಂಟದ ಮೇಲೆ ಹಾಕುವ ತೆರಿಗೆ; ಲಿಪಿಕಾರನ ಮೇಲೆ ವಿಧಿಸುವ ತೆರಿಗೆ:
ಭೂಮಿಗಳು ಮನೆಗಳು ಆಯಹಾರಕ ಕಂಠವಣಗಳೆ ಬುಟ‍್ಟಿ ಮೊರಸಹಿತಾ ಕೊಟ‍್ಟು
(ಮೈಆರಿ. ೧೯೨೮, ೬೪-೧೫; 1533).
ಕತ‍್ತಿಗೆ ಸುತ‍್ತಿಕೊಳ‍್ಳುವ ಬಟ‍್ಟೆ; ರೇಷ‍್ಮೆ ಮೊದಲಾದವುಗಳ ಚಿಕ‍್ಕ ಚೌಕ: “ಕಂಠವಸ್ತ್ರ” (Neckerchief.ಇಂಕನಿ);
ನನ‍್ನ ಕಂಠವಸ‍್ತ‍್ರವನ‍್ನು (ಮಫ‍್ಲರ್) ಕೈಚೀಲದಲ‍್ಲೇ ಇರಿಸಿದ‍್ದೆ
ಎಲಚಿಯ ಹಣ‍್ಣಿನ ಹಾಗೆ ಕೊರಳ ಒಳಗೆ ಶ‍್ಲೇಷ‍್ಮಾಧಿಕ‍್ಯದಿಂದ ಗ‍್ರಂಥಿ ಕಠಿಣವಾಗಿ ಸ‍್ಥಿರವಾಗಿ ಇಹುದು. ಅದು ಕಂಠಶಾಲೂಕವೆನಿಸಿಕೊಂಬುದು