logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಠ
(ನಾ).
೯. (ಭಾರತೀಯ ವಾಸ‍್ತುಶಿಲ‍್ಪದಲ‍್ಲಿ) ದೇವಾಲಯದ ಕಮಾನಿನ ಒಂದು ಅಂಗ. ೧೦. ಒಂದು ಔಷಧಿ ಗಿಡ:
“ಕಾಡಪುಂಖ – ಕಂಠ, ಉತ‍್ತರಣೆ”
(ಓಷಧಿ. ೩೧).

ಕಂಠ
(ನಾ).
ಕಂಠಚಾಮೀಕರನ‍್ಯಾಯ = ಒಂದು ಬಗೆಯ ನ‍್ಯಾಯ; ಕೊರಳಲ‍್ಲಿ ಚಿನ‍್ನದ ಆಭರಣವನ‍್ನಿಟ‍್ಟುಕೊಂಡು ಬೇರೆ ಎಲ‍್ಲಾ ಕಡೆ ಹುಡುಕುವುದು. ಕಂಠಶೋಸಿಕೊಳ‍್ಳು ~ (ಆಲಂ) ವ್ಯರ್ಥವಾಗಿ ಮಾತನಾಡು; ಗಂಟಲು ಒಣಗಿಸಿಕೊಳ‍್ಳು; ಕಂಠಶೋಷಣೆ ಮಾಡಿಕೊಳ‍್ಳು:
ವಿದ‍್ಯಾಗುರು ಎಂದರೆ ಕಾಸಿಗಾಗಿ ಕಂಠಶೋಸಿಕೊಳ‍್ಳುವ ಪಶು ಎಂಬ ಭಾವನೆ
(ಹೇಮಕೂ. ೧೦).
[ಸಂ.]

ಕಂಠಕಚ‍್ಚರ
(ನಾ).
ಕುತ‍್ತಿಗೆಗೆ ತಗುಲಿ ಹಾಕಿಕೊಳ‍್ಳುವ ಚೀಲ (?):
“ಕಂಠಕಚ‍್ಚರದೊಳ್ ಬಕ‍್ಕಳೆ”
(ಕರ್ಣಾನಿ. ೮೪).
[ಕಂಠ + ಕಚ‍್ಚರ]

ಕಂಠಕುಬ‍್ಜ
(ನಾ).
[ವೈದ‍್ಯಶಾ] ಒಂದು ಬಗೆಯ ಸನ‍್ನಿಪಾತ ಜ‍್ವರ:
ಕಂಠಕುಬ‍್ಜ . . . ಪ‍್ರಳಾಪಗಳೆಂದು ಪದಿಮೂರು ತೆರನಾದ ಈ ಸನ‍್ನಿಪಾತಂಗಳ‍್ಗೆ
(ಸಕವೈ. ೧೫೧).
[ಕಂಠ + ಕುಬ‍್ಜ]

ಕಂಠಗತ
(ಗು).
೧. ಕುತ‍್ತಿಗೆಗೆ ಬಂದಿರುವ:
ಮುನಿಕುಮಾರಂ ಬರುತಿರ್ದ ಬಟ‍್ಟೆಯೊಳ್ ಕಂಠಗತಪ‍್ರಾಣನಾಗಿರ್ದೆನ‍್ನಂ ಕಂಡು
(ಕಾದಂಪೂ. ೨೦೮);

ಕಂಠಗತ
(ಗು).
ಕಂಠಗತಪ‍್ರಾಣಿಯವಳ್ ನಿನ‍್ನ ದೂಸಱಿಂ ಬೞ‍್ದಪ‍್ಪಳ್
(ಸೂಕ‍್ತಿಸು. ೧೫-೧೮).

ಕಂಠಗತ
(ನಾ).
೨. (ಆಲಂ) ಪೇಚು; ಅತ‍್ಯಂತ ಕಷ‍್ಟ.
[ಸಂ.]

ಕಂಠಗತವಾಯು
(ನಾ).
ಉಸಿರು ಕೊರಳೊಳಗೆ ಬಂದಿರುವವನು; ಮರಣೋನ‍್ಮುಖನಾದವನು:
ಅಂತು ಬಿೞ‍್ದು ಜಟಾಯು ಕಂಠಗತವಾಯುವಾಗೆ ದಶಕಂಠನುಯ‍್ವ ಸಮಯದೊಳ್
(ಪಂರಾಮಾ. ೯-೧೦೬ ವ).
[ಕಂಠಗತ + ವಾಯು]

ಕಂಠಗತಾಸು
(ನಾ).
ಪ‍್ರಾಣವು ಕೊರಳವರೆಗೆ ಬಂದಿರುವವನು; ಮರಣೋನ‍್ಮುಖನಾದವನು:
ಅಗಧರ ನಿನ‍್ನಂಘ‍್ರಿಭಾರಮಂ ಕ‍್ಷೀಣ ಬಲೋರಗನೆಂತು ಸೈರಿಪಂ ಕಂಠಗತಾಸುವಕ‍್ಕುಮೇಕಕ‍್ಷಣದಿಂ
(ಜಗವಿ. ೩-೧೧೦).
[ಕಂಠಗತ + ಅಸು5]

ಕಂಠಗರಲ
(ನಾ).
ಕೊರಳಲ‍್ಲಿ ವಿಷವುಳ‍್ಳವನು; ಶಿವ (ಕಿ).
[ಕಂಠ + ಗರಲ]


logo