logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಟು1
(ನಾ).
೧. ಬಾವಿಯ ಒಳಗೋಡೆ ಅಥವಾ ಮನೆಯ ಒಳಗೋಡೆಯಲ‍್ಲಿ ಚಾಚಿರುವ ಛಡಿ, _ಚಡ, _ಕಂಟ. ೨. ಪಾತ‍್ರೆಯ ಅಂಚು, __ಕಂಟ. ೩. ಬಾವಿಯಲ‍್ಲಿ ಇಳಿಯುವುದಕ‍್ಕೆ ಮಾಡಿ ಸೋಪಾನಮಾರ್ಗ (ಕಿ).
[<ಕಂಟ?]

ಕಂಟು2
‘ಕಮಟು’ ನೋ.

ಕಂಟೆಯದರ
‘ಕಂಟಿಯದಾರ’ ನೋ.

ಕಂಟೆಯದಾರ
‘ಕಂಟಿಯದಾರ’ ನೋ.

ಕಂಟೆಯಬಾರ
‘ಕಂಟಿಯದಾರ’ ನೋ.

ಕಂಠ
(ನಾ).
೧. ಕೊರಳು. ೨. ಪಾತ‍್ರೆಯ ಕಂಟ. ೩. ನಾದ; ಧ‍್ವನಿ. ೪. ದೇಹ. ೫. ಸಾಮೀಪ‍್ಯ. ೬. ದಂಡೆ; ತಟ; ದಡ. ೭. ಬರೆಯುವ ಉಕ‍್ಕಿನ ಲೆಕ‍್ಕಣಿಕೆ; ಕಂಟ:
“. . . ಕೈಯೊಳಗಿನ ಓಲೆಕಂಠಗಳನ‍್ನು ಬಿಸುಟು ಇದನ‍್ನು ಆರಿಸಿ ಹೋದನು”
(ಕಪಪು. ೬-೬೫);

ಕಂಠ
(ನಾ).
ಬದಿಯಲ‍್ಲಿ ಬರೆಯುವ ‘ಕಂಠ’ವಿದೆ
(ವಿಜಸಾ. ೬೮).

ಕಂಠ
(ನಾ).
೮. ಕಾಂಡ:
“ಪತ‍್ರಿ [ಪಾಠಾಂ. ಪ‍್ರತಿ] ನಾರಾಚಮೆನೆ ಕಂಠ”
(ಮಂಗರಾ. ೧೦೬-೧೫);

ಕಂಠ
(ನಾ).
“ನೀರಲ‍್ಲಿ ನಿಜ ಕಂಠದಲ‍್ಲಿ ಪ‍್ರಸ‍್ತಾವದಲಿ ನಿಂದೆಯಲಿ ಶಸ‍್ತ‍್ರದಲಿ ಕಾಂಡಮಕ‍್ಕುಂ”
(ಮಂಗರಾ. ೧೪೭-೩೮);

ಕಂಠ
(ನಾ).
“ಸಂಹನನ ಸಮೀಪ ನಾದ ತಟ ಕಂಧರಮೆಂಬಿವು ಕಂಠವಾಚಕಂ”
(ನಾನಾರ. ೫೨).


logo