logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿಮಿರ2
೫. ರಾಹು.

ತಿಮಿರ2
೬. ದಡ್ಡತನ; ತಿಳಿಗೇಡಿತನ.

ತಿಮಿರ2
೭. ಠಕ್ಕತನ; ಕುಟಿಲತಂತ್ರ; ಕುಯುಕ್ತಿ.

ತಿಮಿರ2
೮. ತಪ್ಪು; ದೋಷ.

ತಿಮಿರ2
೯. ಕುರುಡತನ; ಅಂದತ್ವ. 'ತಿಮಿರಾಕ್ಷ’ ಪರಾ.
`ಕತ್ತಲೆ ಶೋಕ ರಾಹು ಗುಣಸತ್ವರಜಸ್ತಮ ಮೂಢ ದೋಷಮುಂ ಕೃತ್ರಿಮವೆಂಬಿವುಂ ತಿಮಿರ ಶಬ್ದ`
(ನಾನಾರ. ೧೩).
[ಸಂ.]

ತಿಮಿರಗಣ್ಣು
(ನಾ).
೧. ಕುರುಡಾದ ಕಣ್ಣು; ದೃಷ್ಟಿಹೀನವಾದ ಕಣ್ಣು.

ತಿಮಿರಗಣ್ಣು
೨. = ತಿಮಿರ ರೋಗ:
ಅಂಕೋಲೆಯ… ಬೇರಿನ ತಿಗುಡಂ ಮೊಲೆ ಹಾಲಲ್ಲಿ ತೇದು ಹಚ್ಚಲು ತಿಮಿರಗಣ್ಣು ಮಾಣ್ಗುಂ
(ವಿವೈವಿ. ೧);

ತಿಮಿರಗಣ್ಣು
ತಿಮಿರಗಣ್ಣು, ನೀರುಗಣ್ಣು, ಜಾರುಗಣ್ಣು… ಕೊಳೆಗಣ್ಣು
(ಶುಕಸ. ೩೨೮).
[ತಿಮಿರ2 + ಕಣ್ಣು (<ಕಣ್)]

ತಿಮಿರಪಟಲ
(ನಾ).
ಕತ್ತಲೆಯ ರಾಶಿ:
ಉದಯಗಿರಿಶಿಖರಕ್ಕೆ ರಾಗದಿಂ ಬಂದನಂಬುಜಮಿತ್ರನೆಂದೆನಿಪನಪವಿತ್ರತಿಮಿರಪಟಲಾಮಿತ್ರನು
(ಹಚಕಾ. ೧೩-೧೧).
[ತಿಮಿರ2 + ಪಟಲ2]

ತಿಮಿರಪೂಗ
(ನಾ).
ತಿಮಿರಪಟಲ:
ಬಿರಿಯೆ ಮೃದುಸರೋಜಂ ಬಿಂಕಮಂ ಬಿಟ್ಟು ರಾಜಂ ಜರಿಯೆ ತಿಮಿರಪೂಗಂ ಜಾಱೆ ಜಾರಾನುರಾಗಂ ಸರಿಯೆ
(ರಾಜಶೇ. ೧೨-೨೯).
[ತಿಮಿರ2 + ಪೂಗ]


logo