Kannada Nighantu by Kannada Sahitya Parishattu : Vol-2
೧. ಹೇಸಿಕೆಯನು ನೇಸಱುಗುಲನ ಕಾಳಿಜಂ ಕಂಟಣಿಸ [ಪಾಠಾಂ. ಕರಣಂ ಕಲ‍್ಲಯಿಸಲು] ಬೇಕೆಂದು ನೆರಹಿದಂ
ಗಂಟಲುರಂಬರಂ ಬಱತು ಗೋಣೆೞಲಲ್ ಕಡುಸೇದೆಯಿಂದೆ ಮೈ ಕಂಟಣಿಸುತ‍್ತೆ ಕೋಡಗಱಿಸೀದು ಮುಱುಂಟಿ ವಿಹಂಗ ಸಂಕುಲಂ
ಅಧಿಕನಲ‍್ಲಾ ಕರ್ಣ ಕಿಱುಕುಳನೆ ಕಂಟಣಿಸಬೇಡಿನ‍್ನು ಭಾಷೆಗಳುಂಟು ನಿನ‍್ನಲಿ
೨. ನರಕದ ನೆಲೆ ಪೇಸಿಕೆಗಳ ಕರು ಮಸಣದ ಪುಟ‍್ಟು ಪಾಪದೆಱೆ . . . ಅಂತದಂ ಕಂಡು ಕಂಟಣಿಸುತ‍್ತಮೆನ‍್ನೊಳಿಂತೆಂದೆಂ
ಪೇಸದೆ ಕಂಟಣಿಸದೆ ಬೆರೆತೋಸರಿಸದೆ ಮಾಂಸಸೇವನೆಗೆಯ‍್ದನೆ ಭಕ‍್ತಂ
ಆ ಕೂಂಟಣೆಯ ಕಿವಿಲುತನಮಂ ಕಂಡು ಕಂಟಣಿಸಿ ವಿದೂಷಕನಿವಳಂ ಜವನಾದೊಡೊರ್ಮಿಂಗೆ ಕೊಯ‍್ಯಲಮ‍್ಮನೆಂದು ನುಡಿದು
೩. ಕಣ‍್ಮಲರ್ಗಳ್ ಮಲರ್ದಳ‍್ಳೆಪೊಯ‍್ಯೆ ಮೆಯ‍್ಯೊಱಗೆ ಕೆಲಕ‍್ಕೆ ಕಂಟಣಿಸೆ ಮೆಯ‍್ನವಿರೊಯ‍್ಯನೆ ಕಂಠಕಂದಳಂ ತೆಱೆದು ಮಿಡುಂಕೆ
ಸಂದ ಕಲ‍್ಕರಗೆ ನರರ ಮನ ನಾರಿಯರಿಂದ ಝೋಂಪಿಸದೆ ಕಂಟಣಿಸಿ
೫. ಆತುರಿಸಿ ಕಾಡುವೆನ‍್ನಂಡಲೆಗೆ ಕಂಟಣಿಸ (ಪಾಠಾಂ. ಕಂಟಳಿಸ, ಕಂಠಣಿಸ]ದೀತನಲ‍್ಲದೆ ನಿಲುವರಾರೆಂದು
ಬಂಟನಾಗಿರ್ದ ಗಣಕನ ಕಯ‍್ಯಲೆಂದೊಡವ ಕಂಟಣಿಸದೀಸಿಕೊಂಡಕ‍್ಷರವ ಕಂಡು ಮನವಂಟಿ