logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಟವಣ
(ನಾ).
‘ಕಂಠವಣ’ ಪರಾ.
[ಕಂಟ + ಪಣ1]

ಕಂಟವಲಗೆ
(ನಾ).
ಮುಳ‍್ಳುಹಲಗೆ (?):
ಪೊಂಬಾಳೆಯ ಕಂಬಂಗಳಿಂ ಪಚ‍್ಚೆಯ ಪಲಗೆಗಳಿಂ ಬಕುಳದ ಬೋದಿಗೆಗಳಿಂ ಬಂದೂಕದ ಬಾರವಟ‍್ಟಿಗೆಗಳಿಂ ಕೇತಕಿಯ ಕಂಟವಲಗೆ [ಪಾಠಾಂ. ಕಂಠದಲಗೆ]ಗಳಿಂ ಕುರವಕದ ಕೀೞ‍್ವದುವಂಗಳಿಂ ಮಂದಾರದ ಮೊಳೆಸಾಲ‍್ಗಳಿಂ
(ಕುಸುಮಾ. ೧೨-೧೫೭ ವ).
[ಕಂಟ ? + ಪಲಗೆ]

ಕಂಟಳಿಸು
ಕಂಟಣಿಸು, ಕಂಠಣಿಸು
(ಕ‍್ರಿ).
೧. ಕುಗ‍್ಗು; ಸಂಕೋಚವಾಗು:
ನಿಜಪುರೋಪವನ ಳೀಳೆ ಮಧುಮಾಸ ವಿರತಿಯೊಳ್ ಮಸುಳ‍್ದಿರೆ ಕಂಟಳಿಸಿದ ಮೆಯ‍್ವೆರಸಿ ನಿಸಾಕುಳನಾದೊಂ
(ಶಾಂತಿಪು. ೫-೬೫);

ಕಂಟಳಿಸು
ಕಂಟಣಿಸು, ಕಂಠಣಿಸು
(ಕ‍್ರಿ).
ಪಾೞ‍್ಮನೆವುಲ‍್ಲನುರ್ಚುವಂದದಿನೆಲ‍್ಲಂ ಪಿಡಿದುರ್ಚಿ ಬೇಳ‍್ವರರೆಬರ್ ಸುಡದೞ್ಕಿಕಸಲಾಱದಗ‍್ನಿ ಕಂಟಳಿಸುವಿನಂ
(ಜಗವಿ. ೧೬-೬೨);

ಕಂಟಳಿಸು
ಕಂಟಣಿಸು, ಕಂಠಣಿಸು
(ಕ‍್ರಿ).
ಜಗವೆಲ‍್ಲಂ ಕಡುಪಿಂಗೆ ಕಂಟಳಿಪಿನಂ
ಸೌಇಇ. XV, ೯೨-೮; 12ನೆಯ ಶತ).

ಕಂಟಳಿಸು
ಕಂಟಣಿಸು, ಕಂಠಣಿಸು
(ಕ‍್ರಿ).
೨. ಅಸಹ‍್ಯಪಡು; ಜುಗುಪ‍್ಸೆಪಡು:
ಬಳಮೞಿದಿರ್ದ ತೋಳನಿೞಿಕೆಯ‍್ವಳಿಪಿಂದೆ ಪುರುಳ್ ಧುರಕ‍್ಕೆ ಕಂ(?)ಟಳಿಸೆ ಕನಲ‍್ದು ಪೋಗೆ ಸಿರಿ
(ಚಂದ‍್ರಪು. ೨-೫೧).

ಕಂಟಳಿಸು
ಕಂಟಣಿಸು, ಕಂಠಣಿಸು
(ಕ‍್ರಿ).
೩. ಉತ‍್ಸಾಹಗೊಳ‍್ಳು; ರೋಮಾಂಚನಗೊಳ‍್ಳು; ನಿಮಿರು:
ವೀರರಸಂ ಕರೆಗಣ‍್ಮಿ ಕಂಟಳಿಸೆ ಮೆಯ‍್ನವಿರಗ‍್ಗಳಮೊಪ‍್ಪಿದಂ ಗಳ ಸರಿತ‍್ಸುತನಾಹವಲಂಪಟಂ
(ಕಾವ‍್ಯಾವ. ೪೮೯);

ಕಂಟಳಿಸು
ಕಂಟಣಿಸು, ಕಂಠಣಿಸು
(ಕ‍್ರಿ).
ಇಳಾತಳಕ‍್ಕೆ ಕಿಳಿರ್ದುಪ‍್ಪರಿಸುತ‍್ತುಱೆ ಮೀಂಟಿ ದಾಂಟಿ ಕಂಟಳಿಸಿ ಪೊದಳ‍್ದು ಪಾಯ‍್ದು ಪರಿಯಿಟ‍್ಟುದು ವಾಯುರಯಂ ಹಯದ‍್ವಯಂ
(ರಾಜಶೇ. ೧೩-೯೧).

ಕಂಟಳಿಸು
ಕಂಟಣಿಸು, ಕಂಠಣಿಸು
(ಕ‍್ರಿ).
೪. ಕೇಕರಿಸು:
ತೂಂಕಡಿಸುವ ಬಿಳ‍್ತಾಗುವ ಬಿಕ‍್ಕುವ ತೇಂಕುವ ತೇಗುವ ಕಂಟಳಿಸುವಖಿಳ ವಿಕೃತಿಗೆ ಸಲ‍್ಲಂ
(ಪುಷ‍್ಪಪು. ೧೨-೮೪).

ಕಂಟಳಿಸು
ಕಂಟಣಿಸು, ಕಂಠಣಿಸು
(ಕ‍್ರಿ).
೫. ಹೆದರು; ಭಯಪಡು:
ಖಂಡೆಯ ಬಾಯಿಂ ತೊಲಗದೆ ಕಂಡರ್ ಕಂಟಳಿಸೆ ಕಾದಿದರ್ ಬಲ‍್ಗಂಡರ್
(ಪಾರ್ಶ್ವಪು. ೩-೧೫೧).


logo