logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಟಲೆ
(ನಾ).
ರಸಭಂಡವೈದು ವಿದಳವಿಪ‍್ಪತ‍್ತೈದು ಪಸರ ಪತ‍್ತಿಗೆಯ ಕಂಟಣೆಯೆಪ‍್ಪತ‍್ತೈದು
(ಶಿವಗೀ. ೧೮೯-೯೪೬).

ಕಂಟಲೆ
(ನಾ).
ಕಂಟಲಿ:
ಪರಮೇಶ‍್ವರನು ಒಬ‍್ಬ ಬಣಜಿಗನ ವೇಷದಿಂದ ತನ‍್ನ ಗಿಡ‍್ಡ ಎತ‍್ತಿನ ಮೇಲೆ ಕಂಟಲಿಯನ‍್ನು ಹೇರಿಕೊಂಡು ಸುಮತಿಗೆ ಕಾಣಿಸಿಕೊಂಡನು
(ಭದ‍್ರಾಯು. ೭);

ಕಂಟಲೆ
(ನಾ).
ತಮ‍್ಮಣದೀಕ‍್ಷಿತರ ಕಾಯನ‍್ನು ಮಾತ‍್ರ ಅವರು . . . ತಮ‍್ಮ ಕಂಟಲಿಯಲ‍್ಲಿ ಹಾಕಿಕೊಳ‍್ಳುತ‍್ತ ಬರುತ‍್ತಿದ‍್ದರು
(ಕಲಿಕು. ೫);

ಕಂಟಲೆ
(ನಾ).
“ನಾವೂ ನೀವೂ ನೆಂಟರು, ಆದರೆ ಕಂಟಲಿಯಲ‍್ಲಿ ಕೈಹಾಕಬೇಡಿರಿ”
(ಕುಟುಂಬ. 45).

ಕಂಟಲೆ
(ನಾ).
ಕಂಟಾಳ:
(ಕಿ).

ಕಂಟಲೆ
(ನಾ).
ಕಂಡಾಲ:
ಉಸಿಗನೆಡಗೌಂಕುಳೊಳಗೊಂದು ಕಂಡಾಲಮಂ ಸಸಿನೆದಳೆಯುತ‍್ತೆ ಮಾದೇವಿ ಸಡಗರದೆ ಪಿಂದೆಸೆಯೊಳೊಪ‍್ಪುತ‍್ತಿರಲ್
(ಆರಾಚ. ೮-೪).
[ದೇ. || ತಮಿ. ಕಣ‍್ಟಾಳ; ತೆಲು. ಕಂಟಲ, ಕಂಟ‍್ಲ. / ಮರಾ. ಕಂಠಾಳ, ಕಂಠಾಳೀ]

ಕಂಟಲೆಎತ‍್ತು
ಕಂಟಣೆಯೆತ‍್ತು, ಕಂಠಣೆಯೆತ‍್ತು
(ನಾ).
ಕಂಟಣೆಯನ‍್ನು ಹೊರುವ ಎತ‍್ತು; ಹಸುಬೆಯನ‍್ನು ಹೊರುವ ಎತ‍್ತು:
ಮಂಗಳೂರಿಗೆ ಹೊರಡುವ ಕಂಟಲೆಎತ‍್ತುಗಳ ಜೊತೆಯಲ‍್ಲಿ ತನ‍್ನ ಇಬ‍್ಬರು ಆಳು ಹೊರಡುವಂತೆ ಏರ್ಪಾಡು ಮಾಡಿದನು
(ಚಿಕರಾ. ೩೬೬).

ಕಂಟಲೆಎತ‍್ತು
(ನಾ).
ಕಂಟಣೆಯೆತ‍್ತು:
ಗುಡಿಯುಂ ಕಂಟಣೆಯೆತ‍್ತುಂ ನಡೆಗುದುರೆಯು ಮೆರಡು ಬಂಟರಿರ್ವರ್ ತೊತ‍್ತಿರ್ ಕಡುಗೂರ್ಪ ಮಿಂಡಿವೆಂಡಿತಿಯೊಡವಾರದ ದಂಡು ಜವನ ದಂಡಣೆಯಲ‍್ತೆ
(ಸೂಕ‍್ತಸು. ೧೮-೨೪).

ಕಂಟಲೆಎತ‍್ತು
(ನಾ).
ಕಂಠಣೆಯೆತ‍್ತು:
ಚಂಡಿಗೊಳುವ ಕಂಠಣೆಯೆತ‍್ತ ಸಾಗಿಸಿ ಕೊಂಡೊಯ‍್ವುತ‍್ತಿದ‍್ದರು ಕೆಲರು
(ನಾಗಕು. ೧೫-೫೦).
[ಕಂಟಲೆ + ಎತ‍್ತು2 (<ಎೞ‍್ತು1) / ತಮಿ. ಕಣ‍್ಟಾಳವೆರುದು]

ಕಂಟವಣ
(ನಾ).
ಕಂಟದ ಮೇಲೆ ಹಾಕುವ ತೆರಿಗೆ; ಲಿಪಿಕಾರನ ಮೇಲೆ ವಿಧಿಸುವ ತೆರಿಗೆ:
ಪುರವರ್ಗ ಗೌಡಿಕೆ ಮಾನ‍್ಯ ಪೇಠೆಪದಿಕೆ ಉಂಬ ಸಿದ‍್ಧಾಯ ದಾಯ ಕಾರಕ ಕಂಟವಣ ಮೊದಲವಿದ‍್ಯೆ x x ನುಂಟಾದನುಮ ಮಾಡಿಸಿಕೊಂಡಿದ‍್ದಾ
(ಎಕ. VIII, ಸೊರಬ. ೨೬೬-೩೫; 1629).


logo