logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರುಪೆ
ತಿರುಪ ’ ನೋ.

ತಿರುಪೆಕೂಳು
(ನಾ).
ತಿರಿದು ತಂದ ಆಹಾರ; ಭಿಕ್ಷಾನ್ನ:
ಹರಿವಾಣದೊಳಗಮೃತಾನ್ನವು ಇರುತಿರೆ ತಿರುಪೆಕೂಳನು ತಿನ್ನಲ್ಯಾಕಯ್ಯ
(ಕನಕ. ೧೬೩-೨).
[ತಿರುಪೆ (<ತಿರುಪ) + ಕೂಳು2 (<ಕೂೞ್1)]

ತಿರುಪೆಗಾರ
(ನಾ).
ತಿರುಕ; ಭಿಕ್ಷುಕ:
(ಕಿ).
[ತಿರುಪೆ (<ತಿರುಪ)+ - ಕಾರ1 (<ಕಾಱ)]

ತಿರುಪೆಗಾರ್ತಿ
(ನಾ).
ತಿರುಕಿ; ಭಿಕ್ಷುಕಿ:
(ಕಿ).
[ತಿರುಪೆಗಾರ + - ತಿ1 (<-ಇತ್ತಿ)]

ತಿರುಪೆರಿಭಟ್ಟ
(ನಾ).
ಒಬ್ಬಾತನ ಹೆಸರು:
ತಿರುಪೆರಿಭಟ್ಟರ್ಗ್ಗೆ ಸೆಟ್ಟಿ ಕೊಟ್ಟ ಸರ್ಬಾಪದ ಪರಿಹಾರ
(ಎಕ. X (S), ಬಾಗೇಪ. ೧೦೨-೧; ಸು. 10ನೆಯ ಶತ).
[ತಿರುಪೆರಿ ? + ಭಟ್ಟ]

ತಿರುಪ್ಪಣ್ಣಿ
ತಿರುಪಣಿ2’ ನೋ.

ತಿರುಪ್ಪಾಯಿ
(ನಾ).
ತಮಿಳುಭಾಷೆಯಲ್ಲಿರುವ ಒಂದು ಧಾರ್ಮಿಕ ಗ್ರಂಥದ ಭಾಗ; ಆಂಡಾಳ್ ಬರೆದಿರುವ ನಾಲಾಯಿರ ಪ್ರಬಂಧದ ಒಂದು ಭಾಗ:
ವೇದಪಾರಾಯಣ ತಿರುಪ್ಪಾಯಿ ಶ್ರೀಕಾರಕ್ಕೆ ಊರ ಮೂಡಣ ಮಾಯಣ್ನನ ಭೂಮಿಯೊಳಗೆ ಇರ್ಕ್ಕಣ್ಡುಗ ಗದ್ದೆ ಹೊಲ ತೋಟ ಸಹ… ಧಾರಾಪೂರ್ವಕವಾಗಿ ಕೊಟ್ಟರು
(ಮೈಆರಿ. ೧೯೨೮, ೫೬-೨; 1380).
[ತಮಿ. ತಿರುಪ್ಪಾವೈ]

ತಿರುಪ್ಪು
ತಿರಿಪು1’ ನೋ.

ತಿರುಪ್ರಬಂಧ
(ನಾ).
ವಿಷ್ಣುವಿನ ಪಾರಮ್ಯವನ್ನು ಕುರಿತ ಹಾಡು:
ವಾಸುದೇವನ ತಿರುವಡಿಗಳನ್ನು ನುತಿಸಿ ಪೂಜಿಸಿ ತಿರುಪ್ರಬಂಧಾದಿಗಳ ಪಾರಾಯಣವ ಮಾಡುತಲಿ
(ಗಗತಾ. ೧೯-೪೯).
[ತಿರು2 + ಪ್ರಬಂಧ]

ತಿರುಬೊಬ್ಬೆ
(ನಾ).
ಇನ್ನೊಬ್ಬರ ಮೇಲೆ ತಿರುಗಿಸಿ ಮಾಡುವ ಗದ್ದಲ, - ಕೂಗಾಟ:
ಅಂದರೆ ಇದು ಕಳ್ಳನ ತಿರುಬೊಬ್ಬೆ
(ಸ್ಮೃತಿಚಿ. ೨೪೨).
[<ತಿರುಗು1 + ಬೊಬ್ಬೆ1]


logo