Kannada Nighantu by Kannada Sahitya Parishattu : Vol-2
ಕಂಟದ ಮೊನೆ; ಉಕ‍್ಕಿನ ಲೇಖನಿಯ ತುದಿ:
ಭೂತಳೇಶ‍್ವರ ಧನವೃದ‍್ಧಿ ರಾಜಗೃಹಕರ್ಮಕಳಾಪಸಮವ‍್ಯಯಂ ನಿರಂತರಮಿವರೊಂದು ಕಂಟಮೊನೆ ಬಾಳ‍್ಮೊನೆಯಾಗಿರೆ ಸಲ‍್ವುದು
ಕಂಟಣೆ, ಕಂಟಲಿ, ಕಂಟಾಳ, ಕಂಡಾಲ
ಎರಡೂ ಪಕ‍್ಕಕ‍್ಕೆ ಸಮನಾಗಿ ಕೂಡುವಂತೆ ಹೇರುವ ಎರಡು ಒಡಲಿನ ಚೀಲ; ಹಸುಬೆ:
ಎತ‍್ತು ಕಂಟಲೆ ಕಂಬಿ ಕಾವಡಿ ಹೊತ‍್ತ ಹೊರೆ ಹಸುಬೆಗಳ ಶರಣರ ಮೊತ‍್ತ ಸಾಗಿತು
ಕಂಟಣೆ, ಕಂಟಲಿ, ಕಂಟಾಳ, ಕಂಡಾಲ
ಎಂಟು ತಿಂಗಳ ನಾರಿ ಎಂಟೇನ ಬಯಸಿದಳು ಕಂಟಲೆ ಅಕ‍್ಕಿ ಕೊಡ ತುಪ‍್ಪ
ಕಂಟಣೆ, ಕಂಟಲಿ, ಕಂಟಾಳ, ಕಂಡಾಲ
ಕುದುರೆಯ ಕಡಿವಾಣವು ಕೈಯೊಳಗಿರುವ ವರೆಗೆ ಅದರ ಮೇಲೆ ಕೂತರೂ, ಕಂಟಲೆ ಹೇರಿದರೂ . . . ಸುಮ‍್ಮೆನೆ ಹೋಗುವದು
ನೇಣ್ ಕಂಟಣೆ ಗೋಣಿ ದಂಡಿಗೆ ಸವಂಗಂ ಮೊಚ‍್ಚೆಯಂ ಹಲ‍್ಲಣಂ . . . ಇನಿತುಂ ದಂಡಿಂಗೆ ಸಾಮಗ‍್ರಿಗಳ್