Kannada Nighantu by Kannada Sahitya Parishattu : Vol-4
ತಿರುಗುವ ಒಂದು ಭಂಗಿಯನ್ನು ಹೊಂದು:
ನಡೆದು ನಡೆದು ಲಾಗಿನಲೋಲಾಡುತೆ ತಡೆದು ತಡೆದು ತೂಗುತೆ ಲೋಲಾಡುತೆ ತಿರುಪುಗೊಳಂತೆ ಕಾಳಾಸದಿ ನಿಲುತಂ [ಪಾಠಾಂ. ಪಿರಿದುಂ ನೆಗೆದಾಕಾಶದಿ ನಿಲುತಂ]
ಸುಟಿಯೊಳಾವರ್ತ ತಿರುಪುಗೊಂಡು ನಾಟ್ಯವ ಪಟುಗೊಳಿಸಿದರೇವೇಳ್ವೆ
[ತಿರುಪು2 (<ತಿರಿಪು2)+ ಕೊಳು (<ಕೊಳ್1)]
ಶ್ರೀವೈಷ್ಣವರು ಮಡಿಬಟ್ಟೆ, ಜಪಸರ, ಸಾಲಿಗ್ರಾಮ ಮೊದಲಾದುವುಗಳನ್ನು ಇಡುವ ಪೆಟ್ಟಿಗೆ ಅಥವಾ ಬುಟ್ಟಿ:
ಇವನ ತಿರುಮಣ್ಣಿಡಲು ಅವನ ತಿರುಪುಟ್ಟಿ; ಬೇಹಾರವೆಷ್ಟಿರಲಿ ಬಂದಿಲ್ಲ ಬಿಟ್ಟಿ
ಕತ್ತಲೆ ಗೂಡಿನಂತಿದ್ದ ಭಯಾನಕವಾದೊಂದು ಆಕೃತಿ, ಪಾತಾಳದಿಂದ ಸ್ವರ್ಗದವರೆಗೆ ಬೆಳೆದು ನಿಂತ ತಿರುಪುನಿಚ್ಚಣಿಕೆ… ಆ ಚಿತ್ರಶತಕ್ಕೆ ಏಕಸೂತ್ರವಾಗಿತ್ತು
[ತಿರುಪು2 (<ತಿರಿಪು2) + ನಿಚ್ಚಣಿಕೆ]
(ಹೆಂಗಸರು) ತುರುಬು ಅಥವಾ ಜಡೆಗೆ ತಿರುಗಿಸಿಕೊಳ್ಳುವ ಒಂದು ಬಗೆಯ ಚಿನ್ನದ ಹೂವು; ಜಡೆಯ ಬಿಲ್ಲೆ; ಜಡೆಹೂವು:
[ತಿರುಪು2 (<ತಿರಿಪು2) + ಹೂ2 (<ಪೂ2)./ ತೆಲು. ತಿರುಗುಡುಪುವ್ವು]
೧. "ತಿರುಪುಮೊಳೆಯನ್ನು ತಿರುಗಿಸಿ ಬಿಗಿಸುವ ಸಲಕರಣೆ2: ತಿರುಪುಳಿ, ತಿರುಗುಳಿ"
(Screw-driver. ಇಂಕನಿ).
">
೨. ತಿರುವುಗಳಿಂದ ಕೂಡಿರುವುದು; ಸುತ್ತುಗಳನ್ನುಳ್ಳುದು:
ಯುಗದ ಜುಗದ ತಿರುಪಣಿಯ ದಾರಿಯನ್ನು ಸಾವಕಾಶ ಹತ್ತಿ
ಹಾಕಿರುವ ತಿರುಪಳಿ ಎಲ್ಲಿಯೊ ಸಡಿಲಾದ ಹಾಗಿದೆ
[ತಿರುಪು2 (<ತಿರಿಪು2) + ಉಳಿ5./ ತಮಿ. ತಿರುಪ್ಪುಳಿ; ತುಳು. ತಿರ್ಪುಳಿ, ತಿಪ್ಪಿಳಿ]