Kannada Nighantu by Kannada Sahitya Parishattu : Vol-2
(ಆಲಂ) ಮೈಮೇಲೆ ಮುಳ‍್ಳು ಬರುವಿಕೆ; ನವಿರೇಳುವಿಕೆ; ರೋಮಾಂಚನ:
ಅತಿಪೀಡಿಸುಗುಂ ಸ‍್ಥಾನಚ‍್ಯುತನಾಗಿಯುಮಖಿಳಮಂ ಖಳಂ ವೃತಿವೀರುತ‍್ಪತಿತಂ ಪಥಿಕರ ಪದತಳ ಹತಿಯಂ ಹತಕಂಟಕಾಂಕುರಂ ಮಾಡುವವೊಲ್
ಸ‍್ವಾತಂತ‍್ರ‍್ಯದ ಕಂಟಕಾರಣ‍್ಯವೂ ಪಾರತಂತ‍್ರ‍್ಯದ ಸ‍್ವರ್ಣಪಂಜರಕ‍್ಕಿಂತ ಶತಶಃ ಶ‍್ರೇಷ‍್ಠವಾದುದೆಂಬ ಭಾವನೆಯು ಬಲಿಯತೊಡಗಿ
೧. ಗುಳ‍್ಳದ ಗಿಡ, __ಕಾಯಿ. ೨. ಪಾದರಕ‍್ಷೆ. ೧, ೨ :
ಓದಿದವ ತಾನೆಂದು ತನ‍್ನಯ ಪಾದರಕ‍್ಷೆಯನೌಷಧಕೆ ಸಂಪಾದಿಸುವನೀ ಕಂಟಕಾರಿಯನಱಿಯದವನೆಂದ
[ಸಂ. ಕಂಟಕಾರೀ ; ಕಂಟಕ + ಅರಿ6]
“ನಿದಿಗ‍್ಧಿಕಾ, ಕಂಟಕಾರಿಕಾ, ವ‍್ಯಾಘ‍್ರೀ – ಈ ೩ ನೆಲಗುಳ‍್ಳಂ”
೧. ಮುಳ‍್ಳುಗಳಿಂದ ತುಂಬಿದ‍್ದು. ೨. ಮೀನು. ೩. ಮುಳ‍್ಳುಗಳಿರುವ ಯಾವುದಾದರೂ ಗಿಡ. ೪. ಹಲಸು:
ಕಂಟಕಿಯು ಸಹಕಾರ ದಾಡಿಮಫಲಂ ಟೆಂಟಣಿಸಿ ತಳ‍್ತೊಡೆದು ರಸಪ‍್ರವಾಹಗಳಾಗೆ
ವರದಂತಮಂ ಕ‍್ಷೀರಿ ಕಂಟಕಿಗಳಿಂದೊರಸಿಯುರುನಿರ್ಮಲೋದಕದಿ ಗಂಡೂಷವೆಂಬವನ ಚರಣಾಂಬುಜಕ‍್ಕೆ ಶರಣು
೬. (ಆಲಂ) ಪೀಡಿಸುವುದು; ತೊಂದರೆ ಕೊಡುವುದು. ೭. ವಿಘ‍್ನಕಾರಿ:
ಕಪಟ ಕಂಟಕಿ ಕಟಕಿ ಕಡುದುಷ‍್ಟೆ
(ಆಲಂ) ರೋಮಾಂಚನ ಹೊಂದಿದ ; ಮೈಗೆ ಮುಳ್ಳುಬಂದ:
ಅಲೌಕಿಕಮಮಾನುಷಮೆಂದು ಕಂಟಕಿತಾಂಗನಾದ ನಿಳಾಧಿಪತಿಂ
(ಆಲಂ) ಅಡ‍್ಡವಾದ ಉತ‍್ತರ; ಅಡ‍್ಡಜವಾಬು:
“ಸಾಕುಮಾಡು ನಿನ‍್ನ ಕಟ‍್ಟುಕಥೆಯನ‍್ನು, ಇನ‍್ನುಮೇಲೆ ಈ ಕಂಟಜವಾಬುಗಳನ‍್ನು ಇಲ‍್ಲಿ ಸೈರಿಸುವವರಾರೂ ಇಲ‍್ಲ ಗೊತ‍್ತೇನು?”