Kannada Nighantu by Kannada Sahitya Parishattu : Vol-2
ಎಷ‍್ಟೋ ಜನ ಪೋಲೀಸಿನವರು ಈತನನ‍್ನು ಹಿಡಿದು ಬಂದಿಯನ‍್ನಾಗಿ ಮಾಡಬೇಕೆಂದು ಕಂಟಕಟಿಯಾದ ಸಂಕಲ‍್ಪವನ‍್ನು ಮಾಡಿಕೊಂಡು . . . ಬಸವಳಿದು ಬಿದ‍್ದುಹೋಗಿರುವರು
ಕಂಟಕ ಸಹಿತವಾದ ಬಾಗಿಲು; ದೊಡ‍್ಡ ದೊಡ‍್ಡ ಕಬ್ಬಿಣದ ಮೊಳೆಗಳು ಮುಂದೆ ಹಾಯ‍್ದಿರುವ ಬಾಗಿಲು:
(ಆಲಂ) ೧. ವಿಘ‍್ನಗಳನ‍್ನೆಲ‍್ಲ ನಾಶಮಾಡಿದವನು. ೨. ಕಂಟಕದಿಂದ ಪಾರಾದವನು:
ಎಂಟು ಬಂಟರು ಕಂಟಕನಾಶ [ಪಾಠಾಂ. ಕಂಠನಷ‍್ಟ]ವಾದರು
೧. ಹಲಸಿನ ಮರ. ೨. ಗೋಕ‍್ಷುರದ ಗಿಡ. ೩. ಔಡಲ ಗಿಡ; ಹರಳಿನ ಗಿಡ. ೪. ದತ‍್ತೂರದ ಗಿಡ.
[ಜ‍್ಯೋತಿಷ] ಕೇಂದ‍್ರಸ‍್ಥಾನ:
ನವಪಂಚಮದೊಳ್ ಕಂಟಕಭವನದೊಳಶುಭಗ‍್ರಹಂಗಳಿರೆ ಸೌಮ‍್ಯರ್ ವೈರಿ ವಿನಾಶವ‍್ಯಯದೊಳ್ ನಿಲೆ ರವಿಯುದಯದೊಳಾಗೆ ಶಿಶುಗೆ ಸದ‍್ಯೋಮರಣಂ
(ಆಲಂ) ಶತ‍್ರುರಾಜ; ವೈರಿಯಾದ ಅರಸ:
ಕಂಟಕಭೂಪರ ಕೋಂಟೆಯನಂಟಿ ಕರಂ ಕಾದಿ ಗೆಲ‍್ದು
(ಆಲಂ) ಮುಳ‍್ಳಿನಂತೆ ಇರುವವನು; ವಿಘ‍್ನಕಾರಿ; ಶತ‍್ರು:
ಪರಮಾರ್ಥಮಾರ್ಗಕಂಟಕರೂಪರ್ ಧೀರರ್ . . . ನಡೆತಂದರ್
೧. ಮುಳ‍್ಳಿನಂತೆ ಬಾಗಿರುವುದು. ೨. ಮುಳ‍್ಳಿನ ಡೊಂಕು, __ಮುರಿತ. ೩. (ಆಲಂ) (ಇತರರಿಗೆ) ತೊಂದರೆಯನ‍್ನುಂಟುಮಾಡುವ ಸ‍್ವಭಾವ. ೧, ೩:
ಕಂಟಕವಕ‍್ರಿಮಂ ಬದರದೊಳ್ . . . ಅಲ‍್ಲದಿಲ‍್ಲಮೆಲ‍್ಲಿಯುಂ
೧. ಮುಳ‍್ಳುಗಳಿಂದ ಕೂಡಿರುವಿಕೆ. ೨. (ಆಲಂ) ಬಾಧೆಕೊಡುವವನಾಗಿರುವಿಕೆ. ೧, ೨ :
ನೆಗೞ‍್ದುದ‍್ದಂಡತೆ ಕಂಟಕಸ‍್ಥಿತಿ ಸರೋಜವ‍್ರಾತದೊಳ್ . . . ಪೀನಮೊಪ‍್ಪುಗುಮುರ್ವೀಶರೊಳೊಪ‍್ಪದೆಂದೆಣಿಸಿದಂ ತನ‍್ನೇೞ್ಗಯಿಂ ಪದ‍್ಮಜಂ