Kannada Nighantu by Kannada Sahitya Parishattu : Vol-4
೨. ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿರುವ ಒಂದು ಪ್ರಸಿದ್ಧ ಹಿಂದೂ ಯಾತ್ರಾಸ್ಥಳ; ವೆಂಕಟೇಶ್ವರಸ್ವಾಮಿಯು ನೆಲಸಿರುವ ಬೆಟ್ಟ:
ತಿರುಪತಿ ವೇಂಕಟರಮಣ ನಿನಗೇತಕೆ ಬಾರದು ಕರುಣ
ತಿರುಪತಿ ಕರೆವುದು ಶ್ರೀಶೈಲವನಗೊ ಉಡುಪಿಗೆ ಕಿವಿಗೊಡೆ ಗೋಕರ್ಣ
ತಿರುಪತಿ ಕ್ಷೌರಿಕರು ತಲೇ ಬೋಳಿಸಿದ ಹಾಗೆ
ನಷ್ಟಹೊಂದು; ಕಳೆದುಕೊಳ್ಳು; ಮೋಸಹೋಗು:
ನನಗೆ ಒಂಬತ್ತಾಣೆ ತಿರುಪತಿ ಆದುದರ ವಿನಾ ಇನ್ನಾವ ಒಳ್ಳೆಯ ಪರಿಣಾಮವೂ ಉಂಟಾಗಿಲ್ಲವೆಂದು ವಿಷಾದದಿಂದ ಹೇಳಬೇಕಾಗಿದೆ
ಅರ್ಧಂಬರ್ಧ ಮಾಡಿ ನಿಲ್ಲಿಸಿದ ಕೆಲಸ; ಅಪೂರ್ಣವದ ಕೆಲಸ:
ಮಾಡೋ ಕೆಲಸ ಸರಿಯಾಗಿ ಮಾಡು, ತಿರುಪತಿ ಕ್ಷೌರ ಮಾಡಬೇಡ
[←ತಮಿ. ತಿರುಪ್ಪತಿ; ತುಳು. ತೆಲು. ತಿರುಪತಿ]
ರಂಗುರಂಗಿನಾ ಸೀರೆ, ಕಣ್ಣ ತಿರುಪಾಟವಾಡೆ ಮಧುವು
[ತಿರುಪು1 (<ತಿರಿಪು1) + ಆಟ]
ತಿರುಪಾಟ2, ತಿರುಪಾಟ್ಟು, ತಿರುಪಾಡು
ಶಿವನನ್ನು ಕುರಿತು ಮಾಡುವ ಸ್ತೋತ್ರ; ತೇವಾರ:
ನಂಬ್ಯಣ್ಣನುಸುರ್ದುರುತರಮೆನಿಪ್ಪ ತಿರುಪಾಟುಗಳ ಪಾಡುತ್ತಿರಲ್
ಶ್ರೀಗಿರಿಜಾರಮಣಿಗೆ ನಲಿದಾನತನಾಗಿ ಪಾಡಿದ ನಂಬಿ ತಿರುಪಾಟ