logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಕಣತೊಡು
(ಕ‍್ರಿ).
ಪ‍್ರಜೆಗಳ ನೆಮ‍್ಮದಿ ಸುಖಗಳಿಗಾಗಿ ಕಂಕಣತೊಟ‍್ಟೆ
(ಶಾಂತಲಾ. ೨೭).
[ಕಂಕಣ + ತೊಡು1]

ಕಂಕಣಪ‍್ರಾಪ‍್ತಿ
(ನಾ).
ಮದುವೆಯಾಗುವ ಯೋಗ:
ತನ‍್ನ ಜಾತಕದಲ‍್ಲಿ ‘ಎರಡನೆಯ ಕಂಕಣಪ‍್ರಾಪ‍್ತಿ ಇದೆ’ ಎಂದು ಹೇಳಿರುವುದರ ಅಭಿಪ‍್ರಾಯವೇನು?
(ಮಹಾಗ. ೩೨೦).
[ಕಂಕಣ + ಪ‍್ರಾಪ‍್ತಿ]

ಕಂಕಣಬದ‍್ಧ
(ಗು).
೧. ಮಂಗಳಕಾರ್ಯಕ‍್ಕಾಗಿ ಮುಂಗೈಗೆ ಕಂಕಣವನ‍್ನು ಕಟ‍್ಟಿಕೊಂಡ:
ಮಂಗಳಸ‍್ನಾನ ಮಾಡಿ ಕಂಕಣಬದ‍್ಧನಾದ ರಾಮನು . . . ಅಡವಿಗೆ ಹೊರಟುಬಿಟ‍್ಟನು
(ವಾರಾಕೃ. ೫೭).

ಕಂಕಣಬದ‍್ಧ
(ನಾ).
೨. (ಆಲಂ) ತನ‍್ನ ಗುರಿಯನ‍್ನು ನೆರವೇರಿಸಲು ಪ‍್ರತಿಜ‍್ಞಾಬದ‍್ಧನಾದವನು (ಕಿ).
[ಕಂಕಣ + ಬದ‍್ಧ]

ಕಂಕಣಬಲ
(ನಾ).
೧. ಕಂಕಣವನ‍್ನು ಕಟ‍್ಟುವ ಯೋಗ; ಮದುವೆಯ ಯೋಗ:
ಅವನಿಗೆ ಕಂಕಣಬಲ ಕೂಡಿಬಂತು
(ರೂಢಿ).

ಕಂಕಣಬಲ
(ನಾ).
೨. ಯೋಗ; ಪ‍್ರಾಪ‍್ತಿ.
[ಕಂಕಣ + ಬಲ]

ಕಂಕಣರೇಖೆ
(ನಾ).
[ಸಾಮುದ‍್ರಿ] ೧. ಮಣಿಕಟ‍್ಟಿನಲ‍್ಲಿರುವ ಐಶ‍್ವರ್ಯಸೂಚಕರೇಖೆ:
ಭೂಲಾಭಕಾರ್ಯದಲ‍್ಲಿ ಅಸಹಾಯ ಸಾಮರ್ಥ್ಯವು ಸುಬುದ‍್ಧಿಯು ಶೌರ್ಯವು ಧೈರ್ಯವು ಯಿವು ಕಂಕಣರೇಖೆಗೆ ಫಲ
(ಸಾಮುಲ. ೧೦೧).

ಕಂಕಣರೇಖೆ
(ನಾ).
೨. ಅಂಗೈಯಲ‍್ಲಿರುವ ವಿವಾಹ ಸೂಚಕ ರೇಖೆ. ‘ಆಯುರೇಖೆ’ ಪರಾ.
[ಕಂಕಣ + ರೇಖೆ]

ಕಂಕಣವರ್ಷೆ
(ನಾ).
ಒಂದು ಬಿರುದು:
ಕಂಕಣವರ್ಷೆ ಚಾಗವೆಡಂಗಿ
(ಎಇ. XV, ೩೩೧-೧೫ ; 1028).
[ಸಂ. ಕಂಕಣವರ್ಷಾ (ಕಂಕಣ + ವರ್ಷ + -)]

ಕಂಕಣವಲಯ
(ನಾ).
೧. ಕಡಗ; ಬಳೆ:
ಸೊಗಯಿಸುವ ಕರ್ಣಾವತಂಸ, ಕಂಕಣವಲಯಗಳನ‍್ನು ತೊಡಿಸಿದರು
(ಶಾಂತಲಾ. ೪೫).


logo