logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿಮಿರ2
ಆರು ಕಂಡರು ತಿಮಿರಜನಿತ ವಿಕಾರವನು ಹೇಳಿಗೆಯ ಮುಚ್ಚುಳ ಜಾಱಿಸಿದ ಫಣಿಯಂತೆ ಭುಲ್ಲವಿಸಿತ್ತು ಕುರುಸೇನೆ
(ಕುವ್ಯಾಕ. ೨೩-೩೮):

ತಿಮಿರ2
ಹರಿಗಿರಿ… ಕರಿಗಳೆನ್ನಿಂದಂ ದಲ್ ಕರಿದಾದವೆನಗೆ ನೋಳ್ಪೊಡೆ ಸರಿಯಿಲ್ಲೆಂಬಂತೆ ಘೋರ ತಿಮಿರಂ ಮೆಱೆಗುಂ
(ಹಮ್ಮೀರ. ೨-೧೦೧);

ತಿಮಿರ2
ತಿಮಿರಕ್ಕೆ ರವಿ ದಸ್ಯು, ಜ್ಞಾನಮಜ್ಞಾನಕ್ಕೆ ದಸ್ಯು
(ಶ್ರೀರಾಮಾ. ೧೮೬-೨೮೦).

ತಿಮಿರ2
೨. ಕಣ್ಣಿನ ಒಂದು ರೋಗ; ಕುರುಡುತನದ ರೋಗ:
ಅಂಜನಂಗಳಿಂದಮದೆಂತು ಪರಿಹರಿಸಲರಿದೆನಿಪ್ಪುದು ಪರಮೈಶ್ವರ್ಯ ಪ್ರಭೂತ ತಿಮಿರಾಂಧತ್ವಂ
(ಕಾದಂಪೂ. ೫೩೦);

ತಿಮಿರ2
ಗುರುಗುಂಜೆಯ ಬೇರಂ ಕೊಂಡರೆ ದಾಡಿನ ಮೂತ್ರದಿಂದಮೆಚ್ಚುಗೆ ಜಳದಿಂದರೆದೆಚ್ಚುಗೆ ಮುಸ್ತೆಯನಂತರಿದೆನಿಪಾಸನ್ನ ತಿಮಿರಮಿವಱಿಂ ಕಿಡುಗುಂ
(ಲೋಕೋಪ. ೯-೭೧);

ತಿಮಿರ2
ಆಲಿನೊಂದುದೊ ಕಣ್ಣ ಬೇನೆಯೊ ಮೈಲಗೆಯೊ ಹೂ ಹುಟ್ಟಿದುದೊ… ತಿಮಿರವೊ ಟೊಳ್ಳೆ ಪೋದಪುದೋ
(ಬಸಪು. ೧೮-೬೬);

ತಿಮಿರ2
ಇಂತೀ ದೋಷತ್ರಯದಿಂದಂ ತಿಮಿರಂ ಕಾವ ಪುಷ್ಪಪಟಲಾದಿಗಳುಂ ಭ್ರಾಂತಿಲ್ಲದಕ್ಕುಮಱಿ ಕಡೆಗಂ ತುರಗವಿಲೋಚನಾದಿಯೊಳೆ
(ಅಶ್ವಶಾ. ೧೫-೧೧);

ತಿಮಿರ2
ತಿಮಿರವೆಂಬ ಕಣ್ಣುಬೇನೆ ಇರುವಾತನಿಗೆ ಕೂದಲಗಂಟು ಕಾಣುವಂತೆ
(ತತ್ವಪ್ರಾ. ೧೮೪).

ತಿಮಿರ2
೩. ತಮೋಗುಣ.

ತಿಮಿರ2
೪. ದುಃಖ; ಶೋಕ.


logo