logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಗಾಢಾಯಿಲ
(ನಾ).
೨. “ದೃಢವಾದ”
Deleted and moved to row below
(ಷಟ‍್ಪನಿ.):

ಗಾಢಾಯಿಲ
(ನಾ).
ಕರ್ಣಭೀಮರ ಧರಧುರದ ದೆಖ‍್ಖಾಯ‍್ಲತನ ಗಬ‍್ಬರಿಸಿತಾಹವ ಗರ್ವಿತರ ಗಾಢಾಯ‍್ಲ ಚೇತನವ
(ಕುವ‍್ಯಾಕ. ೧೪-೩).
[ಗಾಢ +-ಆಯಿಲ2]

ಗಾಢಾಯ‍್ಲ
‘ಗಾಢಾಯಿಲ’ ನೋ.

ಗಾಢಾಲಿಂಗನ
(ನಾ).
ಬಿಗಿಯಾಗಿ ಅಪ‍್ಪಿಕೊಳ‍್ಳುವುದು; ಗಟ‍್ಟಿಯಾಗಿ ತಬ‍್ಬಿಕೊಳ‍್ಳುವುದು:
ಸುರತ ಚಂದ‍್ರೋದಯದೊಳ್ ಕಾಮಸುಖಾಬ‍್ಧಿಯುರ್ಕಿ ಪರಿಯೆ ಗಾಢಾಲಿಂಗನಂ ತೆಱಪುಗುಡದಿರೆ
(ಗಿರಿಕ. ೨-೧೦೫ ವ)
[ಗಾಢ + ಆಲಿಂಗನ]

ಗಾಢಾಲಿಂಗನ
(ನಾ).
ಚಂದ‍್ರಾಪೀಡನು . . . ಅಡ‍್ಡಬೀಳಲಾಗಿ ತಾರಾಪೀಡನು ಕೈಗಳ ನೀಡಿ ಸಮೀಪಕ‍್ಕೆ ಕರೆದು, ಗಾಢಾಲಿಂಗನವನು ಮಾಡಿಕೊಂಡು . . .ಕಳುಹಿದನು
(ವಚಕಾ. ೯೧).

ಗಾಢಿಕೆ
(ನಾ).
1. ಉರವಣೆ; ತೀವ‍್ರತೆ; ಉತ‍್ಕಟತೆ; ರಭಸ; ಪ‍್ರಚಂಡತೆ:
ತಗರು ತೊಲಗಿದಡೇನು ಬಲುಗಾಳೆಗದ ಗಾಢಿಕೆ ಮೇಲೆ ಶೌರ್ಯದ ಸೊಗಡ ಸೈರಿಸಲಱಿಯೆ
(ಕುವ‍್ಯಾದ‍್ರೋ. ೧೩-೩೩).

ಗಾಢಿಕೆ
(ನಾ).
2. ಅತಿಶಯ; ಆಧಿಕ‍್ಯ; ಹೆಚ‍್ಚಳ:
ಖಡುಗದ ಘಲ‍್ಲಣೆಯ ಖಣಿಖಣಲ ಗಾಢಿಕೆ ಕಂಟಿಸಿತು ನಭವ
(ಕುವ‍್ಯಾಅ. ೧೮-೩೫).
[ಗಾಢ + -ಇಕೆ]


logo