logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಟಕ
(ನಾ).
ಕಂಟಕದ ಸಂಕಟವ ಕಳೆದು ಮೇಲೇರ್ದರೂ ತಟ‍್ಟಿದೊಡನೆಯೆ ತೆರೆವ ಕದವದಲ‍್ಲ
(ಅನಿಕೇ. ೨-೯).

ಕಂಟಕ
(ನಾ).
೪. ರೋಮಾಂಚನ; ಪುಳಕ; ಮೈ ನವಿರೇಳುವಿಕೆ:
ಪುಳಕಕ‍್ಕೆ ಕಂಟಕವೆಸರಂ ಕೊಟ‍್ಟಜನ ಸುಜನತೆಗೆ ಬೆಱಗಪ‍್ಪೆಂ
(ಚಂದ‍್ರಪು. ೮-೭೫);

ಕಂಟಕ
(ನಾ).
ನೆಗೆವಿನಂ ಕಂಟಕಂ ಚೂತಿಕಾಕೋಮಳೆಯಂ . . . ತಿಳಿಪಿದಂ ಪ‍್ರೇಮಕಾಂತಂ ವಸಂತಂ
(ಅನಂಪು. ೬-೭೪).

ಕಂಟಕ
(ನಾ).
೫. ಬೇಟೆಗಾರ; ಬೇಡ; ಲುಬ‍್ಧಕ. ೬. [ಜ‍್ಯೋತಿಷ] ಕುಂಡಲಿಯ ೧, ೪, ೭ ಮತ‍್ತು ೧೦ನೆಯ ಸ‍್ಥಾನ:
ಉದಯ ದಶಾಸ‍್ತಮಯ ಚತುರ್ಥದೆಡೆಗೆ ಕೇಂದ‍್ರಂ ಚತುಷ‍್ಟಯಂ ಕಂಟಕಮೆಂಬುದು ಸಂಜ‍್ಞೆ
(ಜಾತತಿ. ೧-೩೬).

ಕಂಟಕ
(ನಾ).
೭. ಒಂದು ಜಾತಿಯ ಗಿಡ; ಕಂಟಕ ನಾಳಿಕೇರ ಹಿಂತಾಳ
(ಯಾದವ. ೧-೩೫).

ಕಂಟಕ
(ನಾ).
೮. ಯುದ‍್ಧ; ಕಾಳಗ:
“ಅರಾತಿ ಮುಳ‍್ಳಾಹವ ಕಿಲ‍್ಬಿಷಂ ಪುಳಕ ಲುಬ‍್ಧಕರಿಂತಿವು ಕಂಟಕಾಹ‍್ವಯಂ”
(ನಾನಾರ. ೪೦).
[ಸಂ.]

ಕಂಟಕಂಬಡೆ
(ಕ‍್ರಿ).
೧. ಮುಳ‍್ಳುಗಳನ‍್ನು ಪಡೆದಿರು; ಮುಳ‍್ಳಿನಿಂದ ಕೂಡಿರು:
ಪುಸಿಯುಸುರಿ ಸರ್ವೇಶಂಗೆ ಯೋಗ‍್ಯನಾಗತಿ ಕಂಟಕಂ ಬಡೆದು ನಾಣ‍್ಚದೆ ಯಿಳೆಯೊಳಿಹನು
(ನವಮೋ. ೧೦-೪೦)
[ಕಂಟಕ + ಪಡೆ1]

ಕಂಟಕಂಬಡೆ
(ಕ‍್ರಿ).
2. (ಆಲಂ) ತೊಂದರೆಗೊಳಗಾಗು.
1, 2 : ಮೂಡೆಗಟ‍್ಟಿಂ ಹುಡುಕುನೀರೊಳ್ ಮೆಟ‍್ಟಿ ಕಾಡುತಿಹ ಪಾಮರರ ಕೈವಿಡಿತೆಗೊಲಗಾಗಿ ನಾಡೆ ಪಂಕವ ಪೊಗುತ‍್ತೆರ್ದೆಯೊಡೆದು ಕಂಟಕಂಬಡೆದೆವಿನ‍್ನು . . . ಎಂದು ರಾಗಿಸಿ ಕಳಮೆಯ ಮಡಿಯ ಸಾಲ್ ಮೆಱೆದವು
(ಭಾವಚಿಂ. ೩-೬).

ಕಂಟಕಚಕ‍್ರ
(ನಾ).
ಹಲ‍್ಲುಗಳುಳ‍್ಳ ಚಕ‍್ರ; ಮುಳ‍್ಳುಗಳುಳ‍್ಳ ಚಕ‍್ರ:
ದಂತುರಚಕ‍್ರ, ಅಂದರೆ ಹಲ‍್ಲುಗಳುಳ‍್ಳಂಥ ಚಕ‍್ರ, ಇದಕ‍್ಕೆ ಕಂಟಕಚಕ‍್ರ, ಅಂದರೆ ಮುಳ‍್ಳುಗಳುಳ‍್ಳಂಥ ಚಕ‍್ರವೆಂತಲೂ ಅನ‍್ನಬಹುದು
(ಮುಂಬಯಿ. ೫-೧೯೧ ಅಡಿಟಿ).
[ಕಂಟಕ + ಚಕ‍್ರ]

ಕಂಟಕಛೇದ‍್ಯ
(ನಾ).
ಮುಳ‍್ಳುಗಳನ‍್ನು ಕತ‍್ತರಿಸುವಿಕೆ:
“ಚುರ್ಚುವತಿ ವಾಕ‍್ಯಮಂ ನುಡಿವಲ‍್ಲಿ ಮೂತ‍್ರಗಂಧದೊಳು ಕಂಟಕಛೇದ‍್ಯದೆಡೆಯಲ‍್ಲಿ ಕೊರ್ಚು”
(ಶಬ‍್ದಮಂ. 87).
[ಕಂಟಕ + ಛೇದ‍್ಯ]


logo