Kannada Nighantu by Kannada Sahitya Parishattu : Vol-4
ಮಡಿಬಟ್ಟೆಗಳನ್ನು ಇಡುವುದಕ್ಕಾಗಿ ಶ್ರೀವೈಷ್ಣವರು ಬಳಸುವ ಓಲೆಗರಿಯ ಬುಟ್ಟಿ,- ಗೂಡೆ:
ಮೊದಲ ರಾತ್ರಿಯೇ ತಿರುಪಕೂಡೆಗೆ ಮಡಿಬಟ್ಟೆಯನ್ನು ಹಾಕಿಟ್ಟು ಬೆಳಗಾದ ಒಡನೆಯೇ ಅದನ್ನು ಹೆಗಲಿಗೆ ಹಾಕಿಕೊಂಡು ನದಿಗೆ ಸ್ನಾನಕ್ಕೆ ಹೋಗುತ್ತಿದ್ದರು
ಜೋಡಿದಾರರು, ಓಲೆಗರಿ ಪುಸ್ತಕಗಳೂ ತಿರುಪಕೂಡೆಗಳೂ ನಾಮದ ಗೆಡ್ಡೆಗಳೂ ತುಂಬಿದ್ದ ಒಂದು ಕೊಠಡಿಯನ್ನು ಧೂಳು ಹೊಡೆಸಿ ಅವರಿಗಾಗಿ ಸಿದ್ಧಮಾಡಿದ್ದರು
ಪಾರುಪತ್ತೇಗಾರರು ಸ್ನಾನ ಮಾಡಿ ಹೆಗಲಿನ ಮೇಲೆ ತಿರುಪಕೂಡೆಯನ್ನೂ ತಲೆಯ ಮೇಲೆ ಒಗೆದ ಪಂಚೆಗಳನ್ನೂ ಬಲಗೈಯಲ್ಲಿ ಚೊಂಬಿನಲ್ಲಿ ತೀರ್ಥವನ್ನೂ ತೆಗೆದುಕೊಂಡು
[←ತಮಿ. ತಿರುಪ್ಪುರ್ಕೂಟೈ; ತೆಲು. ತಿರಿಪಗೂಡ. ತಿರಿಪುಗೂಡ]
೧. ದೇವಾಲಯದ ಸೇವೆ; ದೇವಸ್ಥಾನದ ಕೆಲಸ.
ಯಿಷ್ಟು ಸ್ವಾಸ್ಥ್ಯವನ್ನು ಗುರುಮೂರ್ತಿ ತ್ರಿಯಂಬಕಲಿಂಗಗೆ ಅಂಗಭೋಗ ರಂಗಭೋಗ ತಿರುಪಣಿ ಕೆಱೆ ಕಾಲುವೆಗೆ ಯಿಷ್ಟಕೆ ಶಲವಾಗಿ ಸಮರ್ಪಿಸ್ತನು
(ಎಕ. XIV, ಗುಂಡ್ಲುಪೇ. ೧೨೮-೧೦೬; 1510);
ತೇರು ತಿರುನಾಳು ತಿರುಪಣಿ ಮಾಸೋತ್ಸವ
(ಎಕ. IX, ಚನ್ನಪ. ೫೩-೧೨; 1534).
೩. ದೇವಾಲಯದಿಂದ ಬರುವ ವರಮಾನ:
ತಿರುಪಣಿಗೆ ಸಮರ್ಪಿಸ್ತ ರಾಯದುರ್ಗದ ಸೀಮೆಗೆ ಸಲ್ಲುವ [ಬ್ರ]ಹ್ಮ ಸಮುದ್ರದ ಗ್ರಾಮ
(ಸೌಇಇ. IV. ೨೫೫-೧೩, 1513).
೨. ಯೇಳು ನಿಲೆಯ ಗೋಪುರದ ತಿರುಪ್ಪಣ್ಣಿಗೆ ಕಲ್ಲು ಹಚ್ಚಿಸಿದ ಗ ೭೨೫೦
(ಸೌಇಇ. IX-II. ೫೫೧-೪; 1532).
ತಿರುಪತಿ ನೂಱೆಂಟರೊಳಂ ಪರಮಾತ್ಮನ ದಿವ್ಯಮೂರ್ತಿಗಳ್ ಸ್ಫುರಿಕುಂ