Kannada Nighantu by Kannada Sahitya Parishattu : Vol-2
ಅದರ ಬಾಯಿಗೆ ಒಂದು ಅರ್ಧ ಹರಿವೆಯ ಕಂಟವನ‍್ನು ಹಾಕಿ – ಆ ಕಂಟದ ಕೊಪ‍್ಪರಿಗೆಯೊಳಗೆ
೩. ಗದ‍್ದೆ ಅಥವಾ ಕೆರೆಯ ಅಂಚು (?):
ಬಡಗಲು ಹರಿದ ಅವಳೆಯ ಕಂಟ‍್ಟದ ಮೇಲೆ ನಟ‍್ಟಕಲು ಗಡಿ
ಕಮಳಕಾನನಕಂಟಕಲಗ‍್ನಪಾದನಾದ ವೊಲುಡುಗುತ‍್ತುಮಾತ‍್ಮಕರಮಂ ರವಿ ಪೊರ್ದಿದನಸ‍್ತಶೈಲಮಂ
ಕಂಟಕದೊಳ್ ಕೋದೆಳಮುತ‍್ತುಗಳೆನೆ ನಿಂದುವು ಜಡಬಿಂದುಗಳ್
೨. (ಆಲಂ) ಉಪದ‍್ರವಕಾರಿ; ಶತ‍್ರು:
ಕಂಟಕನಲಾ ಧರ್ಮಪ‍್ರಭಾವಕೆ ಕೌರವೇಶ‍್ವರನು
ಎಂಟು ಕಂಟಕರಿಂಗೆ ನೆಂಟರುಗಳಯ‍್ವರಿಗೆ ಗಂಟಲಗಾಳನಾಗಿಪ‍್ಪ ಗುರು ನೀಲಕಂಠನಾಗಿಕ‍್ಕು
ಇಂದುಮೌಳಿಯ ಸೇವೆಗಿಂದು ಪುಳಿಂದ ಕಂಟಕನಾದನೇ
ಪರದೈವ ಭಜನೆಗಳನಿಂದ‍್ರಿಯಾರ್ಥಂ ಮಾಳ‍್ಪ ನರರ್ಗೆ ಕಂಟಕಮಪ‍್ಪುದು