logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರುಪ
ತಿರಿಪೆ, ತಿರುಪೆ
(ನಾ).
೧. ಅಲೆತ; ಭಿಕ್ಷಕ್ಕಾಗಿ ಸುತ್ತುವಿಕೆ.

ತಿರುಪ
೨. ಭಿಕ್ಷೆ; ಯಾಚನೆ:
ತಿರುಪಕ್ಕೆ ಬಂದಿರೋ ಹಾಗಿದೆ
(ಉಡುಗೊ. ೫೮);

ತಿರುಪ
ತಿರುಪದ ಪುಟ್ಟಿಯಲ್ಲಿ ಶನೀಶ್ವರ ಕೂತ
(ಗಾದೆ).

ತಿರುಪ
ತಿರಿಪೆ:
೩. ಭಿಕ್ಷೆ ಎತ್ತಿದ ಆಹಾರ ಅಥವಾ ಧಾನ್ಯ:
ಬಡವರಲ್ಲಿ ಅನೇಕರು ತಿರಿಪೆ ತಿಂದೇ ಬದುಕುತ್ತಾರೆ
(ರೂಢಿ).

ತಿರುಪ
ತಿರುಪೆ:
೨. ಅಕ್ಕರವು ಲೇಖಕ್ಕೆ ತರ್ಕ ತಾ ವಾದಕ್ಕೆ ಮಿಕ್ಕ ಓದುಗಳು ತಿರುಪೆಗೆ
(ಸರ್ವಜ್ಞ. ೪೬೧);

ತಿರುಪ
ನಾಲ್ಕುಜನ ಸರೀಕರಲ್ಲಿ ತಿರುಪೆಗೆ ಕೈಯೊಡ್ಡಿದೆ
(ಕಾಮಿಕಾಂ. ೨೦೭);

ತಿರುಪ
ತಿರುಪೆಗೆ ಹೊರಟವರಂತಿತ್ತು
(ದೀಪದ. ೨೨).

ತಿರುಪ
೩. ನಿನ್ನನ್ನು ನಂಬಿದರೆ ತಿರುಪೆಯೂ ಹುಟ್ಟಲೊಲ್ಲದು ಕೇಳೊ ಹರಿಯೆ
(ಪುರಂದ. ೪-೮೭-೩).

ತಿರುಪ
ತಿರುಪವೆತ್ತು, ತಿರುಪೆಎತ್ತು =
ಭಿಕ್ಷೆಬೇಡು:
ನಿನ್ನಂತಹ ಮಗನನ್ನು ಹೆತ್ತು ಅವರು ಗೋಳಿಡುತ್ತ ತಿರುಪವೆತ್ತಿ ಹೊಟ್ಟೆ ಹೊರೆಯುತ್ತ ಭೂಮಿಯ ಮೇಲೆ ಇರಬೇಕಾಗುವುದಲ್ಲ
(ಭೀಷ್ಮಚ. ೧೫೫);

ತಿರುಪ
ತಿರುಪೆ ಎತ್ತಬಹುದಿತ್ತು
(ಮುಂಗಾಮು. ೧೮).
[ದೇ.|| ತುಳು. ತಿರುಪ. ತಿರುಪೆ; ತೆಲು. ತಿರಿಪ]


logo