Kannada Nighantu by Kannada Sahitya Parishattu : Vol-4
ತಿರುನಾಳೆಂಬುದು ತನಗಂ ನಿರುತಂ ತಾಯ್ತಂದೆ ಬಂಧು ಗತಿಮತಿಯೆನುತಂ… ಜಾನಿಸುತಿರ್ಪಂ
ಹರನ ಭಕ್ತರ್ಗೆ ಹರುಷಂ ಬಪ್ಪ ಮಾಳ್ಕೆಯಿಂ ತಿರಿನಾಳ್ಬರಲು ಪುರವನರ್ತಿಯಿಂ ಕಯ್ಗೆಯ್ದು
ವೇದಗಿರಿಪೆರುಮಾಳಿಗೆ ತಿರುಣಾಳನು ಸಾಗಿಸಿ ಪೂಜೆಯನು ಮಾಡಿಸೊದು
(ಸೌಇಇ. IX-ii; ೫೨೬-೧; 1529).
ತಿರುವಧ್ಯಾನ ತಿರುನಾಳು ತಿರುವಿಶಾಖ ನಿತ್ಯಸಮಾರಾಧನೆ ನೈಮಿತ್ತಿಕಸಮಾರಾಧನೆ ನಡೆವಂತಾಗಿ
(ಎಕ. XIV, ಶ್ರೀರಂಗ. ೮೭-೧೬; 1370);
ನಂಮ ಸ್ಥಾನದಿಂದ ಬಂದ ತಿರುನಾಳ ಕಾಣಿಕೆ
(ಸೌಇಎ. ೧೯೩೪, ಪುಂಗನೂರು. ೧೫೬-೧೪; 1419);
ಕರಿರಾಜ ತಿರುನಾಳು ಭಾಸುರವಿಡಿದಿಹ ಪಿರಿಯ ಸಂಕ್ರಮ ತಿರುನಾಳಂ ವರರಥಸಪ್ತಮಿಯುತ್ಸವ ತಿರುನಾಳು ಮೆಱೆದುವು ರಂಗೇಶಗಾಗ
[←ತಮಿ. ತಿರಿನಾಳ್; ತೆಲು. ತಿರುನಾಳ್ಲು]
ಪವಿತ್ರವಾದ ಬೂದಿ; ಭಸ್ಮ; ವಿಭೂತಿ:
ನೀವು ಮಂತ್ರಿಸೆನುತ್ತ ತಿರುನೀಱೋವಿ ಮಂತ್ರಿಸಿ ಹಾಯ್ಕಲು
`ತಿರುನೀರು- ವಿಭೂತಿ (ಈ ಮಾತು ತಮಿಳುನಾಡಿನಲ್ಲಿ ರೂಢಿಯಲ್ಲಿದೆ)`
[ತಮಿ. ತಿರುನೀಱು; ತೆಲು. ತಿರುನೀಱು. ತಿರುನೀರು, ತಿರ್ನೀರು]