Kannada Nighantu by Kannada Sahitya Parishattu : Vol-2
ಕಂಜಾಲಯಳ್ ~ ಕಮಲವನ‍್ನೇ ಮನೆಯಾಗಿ ಉಳ‍್ಳವಳು; ಲಕ‍್ಷ‍್ಮಿ:
ಮುಂಜಕೇಶಿಯ ಸತ‍್ತ‍್ವಗುಣ ವೃತ‍್ತಮಾದುದೋ ಕಂಜಾಲಯಳ ಮುಕುರ ನಡೆಗಲ‍್ತುದೋ
ತಾವರೆಯನ‍್ನೇ ಪೀಠವಾಗಿ ಉಳ‍್ಳವನು; ಬ‍್ರಹ‍್ಮ:
ನಮಗೀಗೆ ಬೇೞ‍್ಪ ವರಮಂ ಶ‍್ರೀರಾಜ ಕಂಜಾಸನಂ
ಕಮಲವನ‍್ನೇ ಬಾಣವನ‍್ನಾಗಿ ಉಳ‍್ಳವನು; ಕಾಮ:
ಲೀಲಾಕಮಲಂ ಕರಾಂಬುಜದಿನಾಗಳ್ ಸೂಸೆ ಕಂಜಾಸ‍್ತ‍್ರನಂ ನಗುವಂತೊಪ‍್ಪುವನಂ ಮೃಗಾಕ‍್ಷಿ ನಡೆನೋಡುತ‍್ತಿರ್ದಳಾ ಭೂಪನಂ
ಕಮಲದಂತೆ ಮುಖವುಳ‍್ಳವಳು; ಕಮಲಮುಖಿ (ಕಿ).
[ಸಂ. ಕಂಜಾಸ‍್ಯಾ (ಕಂಜ + ಅಸ‍್ಯ + -)]
ಇದೆ ಪರ್ವಿತ‍್ತು ಮತಂಗ ಜೋಚ‍್ಚಲಿನ ಕಂಜಾಳೀ ರಜಸ‍್ತೋಮಂ
ಮಂಜುಳದ ಕಂಜಾಳಿಗಳ ಕಡುಪರಿಮಳದ ಪಸರದ ಸೊಗಸು ತೀವಿತು ವಿಮಳ ಪದ‍್ಮಾಕರದ ಪವಮಾನ
ಆದರೆ ಅವರು ಅಷ‍್ಟೆಲ‍್ಲ ಇದ‍್ದರೂ ಹದಿನಾರಾಣೆ ಕಂಜೂಷಿಗಳು
[← ಮರಾ. ಕಂಜೂಸ್, ಕಂಜೂಷ್; ಹಿಂ. ಕಂಜೂಸ್]
ಕಮಲದಂತೆ ಕಣ‍್ಣುಳ‍್ಳವಳು; ಕಮಲಾಕ‍್ಷಿ (ಕಿ).
[ಸಂ. ಕಂಜೇಕ‍್ಷಣಾ (ಕಂಜ + ಈಕ‍್ಷಣ + -)]