logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರುಣಿ
(ನಾ).
೧. ಕುಂಬಾರನ ಚಕ್ರ:
ಅನುವಿನಿಂ ಕುಂಬಱಂ ಪಿಡಿದ ದಂಡದಿನಚೇತನಮಾದ ಚಕ್ರಮಂ ತಿರುಪಲಾ ತಿರುಣಿ ತಿರ್ರನೆ ತಿರುಗುವಂತೆ
(ಪಾಸೋಪು. ೯-೪೩).

ತಿರುಣಿ
೨. ಮಲ್ಲಯುದ್ದದ ಒಂದು ವರಸೆ:
ತಿರುಣಿ ಕುಳಾಡೆ ಬಾಹುಗೆಣೆ ಸಂದ ಸುಭಾಹುಡೆ… ಕತ್ತರೆಗಳೆನಿಪ್ಪ ಜಟ್ಟಿಗರ ಬಿನ್ನಣಮೊಪ್ಪೆ ಕಡಂಗಿ ಕಾದಿದರ್
(ತ್ರಿಪುವಿ. ೨೬-೧೮).
[<ತಿರುಗಣೆ]

ತಿರುತುಳಸಿ
(ನಾ).
ತುಳಸಿಯಲ್ಲಿ ಒಂದು ಬಗೆ; ಶ್ರೀತುಳಸಿ:
ತಿರುಪತೀ ಹಾದೀಲಿ ತಿರುತುಳಸಿಮರ ಹುಟ್ಟಿ ಬೇಲೂರ್ಗೆ ಬೇರು ಹರಿದಾವೊ, ತಿಮ್ಮಪ್ನ ಕಲ್ಯಾಣ್ಕೆ ಮಗ್ಗು ಸುರಿದಾವೊ
(ಹಳ್ಳಿಯ. ೨೨).
[ತಿರು2 + ತುಳಸಿ (=ತುಲಸಿ)]

ತಿರುದಳ
(ನಾ).
ಮೂರು ಎಸಳುಗಳುಳ್ಳ ಪತ್ರೆ; ಬಿಲ್ವ:
೪೪ ತಿರುದಳದ ಹುವು ೧೪೪ ಭಂಡಿ ಚಕ್ರಕ್ಕೆ ಅಷ್ಟದಳ ಹುವು
(ಎಕ. XIV, ನಂಜನ. ೨೮೯-೫ನೇ ಕಲಂ; 1847).
[<ಸಂ. ತ್ರಿದಲ]

ತಿರುನಕ್ಷತ್ರ
(ನಾ).
ಮಹಾತ್ಮರು ಹುಟ್ಟಿದ ನಕ್ಷತ್ರವು ಬರುವ ದಿನ; ಜಯಂತಿ:
ಈ ದಿನ ರಾಮಾಜುನ ತಿರುನಕ್ಷತ್ರ
(ಈಚಕ. ೯೦).
[ತಿರು2 + ನಕ್ಷತ್ರ]

ತಿರುನಱುಂಗೊಂಡೆ
(ನಾ).
ಒಂದು ಊರಿನ ಹೆಸರು:
ಪಞ್ಚ ಮಹಾ ಪಾತಕದ ಫಲ (೦) ಮಿನೆಬರ್ಗ್ಗಮಪ್ಪುದು ತಿರುನಱುಂಗೊಣ್ಡೆಯ ಕಿೞೆಪ್ಪಳ್ಳಿ ಬೞಿ
(ಸೌಇಇ. IX-I, ೧೯-೧೩; 9ನೆಯ ಶತ).

ತಿರುನಾಮ
(ನಾ).
ಶ್ರೀವೈಷ್ಣವರು ಧರಿಸುವ ನಾಮ:
ಹರಿದಾಸರುಗಳು ತಿರುನಾಮ ತಿರುಚೂರ್ಣಗಳ ಪಣೆಯೊಳಗಿಟ್ಟು ತಿರಿಗಿ ಹರಿಯ ಧ್ಯಾನಿಪರು
(ಕಂನವಿ. ೫-೫೭).

ತಿರುನಾಮ
ತಿರುನಾಮ ಹಾಕು =
ಮೋಸಮಾಡು:
ನಾಲ್ಕು ದಿವಸ ಕಾಲ ವಿಳಂಬವಾದರೂ ನಾವೇನು ತಿರುನಾಮ ಹಾಕಿ ನಿಮ್ಮ ಹಣ ನುಂಗುವುದಿಲ್ಲ
(ಕಾವೇರಿ. ೫೦).
[←ತಮಿ. ತೆಲು. ತಿರುನಾಮ]

ತಿರುನಾಮಧಾರಿ
(ನಾ).
ತಿರುನಾಮವನ್ನು ಧರಿಸಿದವನು; ಶ್ರೀವೈಷ್ಣವ:
ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ ಜನ್ಮಸಾರ್ಥಕವಿಲ್ಲದವರೆಲ್ಲ ಭಾಗವತರೆ
(ಕನಕ. ೧೨೬ ಪಲ್ಲವಿ).
[ತಿರುನಾಮ + - ಧಾರಿ]

ತಿರುನಾಳ್
ತಿರಿನಾಳ್, ತಿರುಣಾಳು, ತಿರುನಾಳು
(ನಾ).
ಹಬ್ಬದ ದಿನ; ಪರ್ವದಿನ:
ದಿನವು ಬೇಱಿಲ್ಲ ತಿರುನಾಳೆ ದಿನವಾ ಪುರಕೆ
(ತಿರುರ. ದೇ. ೩-೧೪);


logo