Kannada Nighantu by Kannada Sahitya Parishattu : Vol-2
೧. ಕಮಲಗಳ ಸಮೂಹ. ೨. ಕಮಲಗಳಿಂದ ತುಂಬಿದ ಕೊಳ; ಕಮಲಾಕರ:
ತರುಲತೆಗಳಿಱುಬಿನಲಿ ಕಂಜಾಕರದ ತಡಿಯಲಿ ನಿಂದು ಮೆಲ‍್ಲನೆ ಕರೆದು ಕೇಳಿಸಿ ಹೇಳಿದರು ತಂತಮ‍್ಮ ಹೆಸರುಗಳ
ತಾವರೆಯಂತೆ ಕಣ‍್ಣುಳ‍್ಳವನು; ವಿಷ‍್ಣು:
ಕಂಜಾಕ‍್ಷನಂ ಪೂರ್ವಪುಣ‍್ಯದ ಪುಂಜಂ ನೆರೆದೆಯ‍್ದಿದಂತೆ ಬಲಗೊಂಡಾನಂದದಿಂ ದಕ‍್ಷಿಣಾಂಸದ ಮೇಗಿರ್ದುದು
೧. ನೀರಿನಲ‍್ಲಿ ಹುಟ‍್ಟಿದ‍್ದು; ಕಮಲ. ೨. ತಲೆಗಳ ಗುಂಪು. ೧, ೨:
ಮುಳಿಸಿಂದಿಸಲೊಡವಾಱುವ ಶಿಳೀಮುಖಂಗಳೆ ಶಿಳೀಮುಖಂ ಕಂಜಾತಂಗಳೆ ಕಂಜಾತಮೆನಲ್ ಪೊಗೊಳನಂ ಪೋಲ‍್ತುದು ನಭಂ ಧನುರ್ಧರಧುರದೊಳ್
ಈ ತೆಱದಿ ಫಲುಗುಣನ ರೂಪ ದಶಾತಿಶಯ ಲಕ‍್ಷಣವನಾ ಕಂಜಾತನಯನನು ಪೇಳಲು
ಇದು ತಾನಾಕೆ ಪೊರಳ‍್ದ ಪುಷ‍್ಪಶಯನಂ ಕಂದಿರ್ಪ ಕಂಜಾತಪತ‍್ರದೆ ಸೂಕ‍್ಷ‍್ಮಾಗ‍್ರ ನಖಂಗಳಿಂ ಬರೆದನಂಗಾಲೇಖನಂ
ಕಮಲವನ‍್ನೇ ಪೀಠವಾಗಿ ಉಳ‍್ಳವನು; ಬ‍್ರಹ‍್ಮ:
ಪ‍್ರೀತಿಯಲಿ ಕುಳ‍್ಳಿರ್ದರಾ ಕಂಜಾತಪೀಠನ ಸೂನು ಬಳಿಕಾದರದಲಿಂತೆಂದ
ಕಮಲದಲ‍್ಲಿ ಹುಟ‍್ಟಿದವನು; ಬ‍್ರಹ‍್ಮ:
ಸುರಸ‍್ತ‍್ರೀಭಾಗ‍್ಯ ಸೌಭಾಗ‍್ಯ ಸಮ‍್ಮ[ದ]ಸೌಂ[ದ]ರ್ಯ್ಯಮನಾಯ‍್ದು ತೀವಿ ಪದೆದಂ ಕಂಜಾತಸಂಜಾತನೀ ಸು[ದತೀ]ರತ‍್ನಮಂ
ಕಮಲಗಳಿಗೆ ಪ‍್ರಿಯನಾದವನು; ಸೂರ್ಯ:
ಕಂಜಾಪ‍್ತ ನಿನ‍್ನನೀ ಮುಂಜಾನೆ ಹೊಗಳುವವು ಮಂಜುಳಧ‍್ವನಿಯಿಂದ ವಿಹಗಂಗಳು
ಕಮಲದ ಶತ‍್ರು; ಚಂದ‍್ರ (ಕಿ).
ಕಮಲಕ‍್ಕೇ ಮನೆಯಾಗಿರುವುದು; ಕೊಳ.