Kannada Nighantu by Kannada Sahitya Parishattu : Vol-4
೧. ವೃತ್ತಾಕಾರವಾಗಿ ಸುತ್ತುವ ಕೋಲು:
ಇದರ ನಡುವೆ ಒಂದು (Rotor) ತಿರುಗೋಲು ಚಲಿಸುವುದು
೨. ಸುತ್ತಿ ಆಡುವ ಕೋಲಾಟ; ಜಡೆಕೋಲಾಟ:
ಸುರದಂತಿಯುರುದಂತಮಂ ಮುಱಿದು ತಿರುಕೋಲನಾಡುವರು
[<ತಿರುಗು1 + ಕೋಲು1 (<ಕೋಲ್1)]
೧. ನುಲಿದುಕೊಂಡಿರುವಿಕೆ; ಹೊಸೆದುಕೊಂಡಿರುವಿಕೆ:
ಮೇಸನ್ ಎಂಬುವವರಿಗೆ ಆಫ್ಘಾನಿಸ್ಥಾನದ ಸ್ತೂಪಗಳಲ್ಲಿ ದೊರೆತ ತಿರುಚುಗಳು. ದಾರ ಬಿಗಿದಿರುವ ಈ ತಿರುಚುಗಳಲ್ಲಿ ಬರೆಹವಿದೆ
ಶ್ರೀವೈಷ್ಣವರು ನಾಮದ ಮಧ್ಯರೇಖೆಗೆ ಉಪಯೋಗಿಸುವ ಕೇಸರಿಬಣ್ಣದ ಹುಡಿ:
ಮುಟ್ಟಬೇಡ… ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರ
ಹರಿದಾಸರುಗಳು… ತಿರುನಾಮ ತಿರುಚೂರ್ಣಗಳ ಪಣೆಯೊಳಗಿಟ್ಟು ತಿರಿಗಿ ಹರಿಯ ಧ್ಯಾನಿಪರು
ತಿರುಮಣ್ ಶ್ರೀಚೂರ್ಣ (ತಿರುಚೂರ್ಣ) ಇವುಗಳನ್ನು ಧರಿಸಿದಲ್ಲಿ … ದೇಹಕ್ಕೆ ಕಾಂತಿಯನ್ನುಂಟುಮಾಡಿ ಸಕಲ ದೋಷಂಗಳನ್ನೂ ಹೋಗಲಾಡಿಸುವುದು
[←ತಮಿ. ತಿರುಚ್ಚೂರಣ; ತೆಲು. ತಿರುಚೂರ್ಣ]
ಬೇಳಿಊರು ಎಣ್ಬತ್ತು ಗದ್ಯಾಣ ಪೊನ್ನುಂ ಎಣ್ಟುನೂಱು ಬತ್ತಮುಮ್ ತಿರುಚೊಂ