Kannada Nighantu by Kannada Sahitya Parishattu : Vol-2
ಸಣ‍್ಣ ತಮಟೆಯಂಥ ಒಂದು ವಾದ‍್ಯ:
ಹಯಾತ್ ಕೈಯಲ‍್ಲಿ ಕಂಜರಿ ಹಿಡಿದು ನಿಂತ ಅಂದರೆ ಸಾಕು: ಒಂದು ಕ‍್ಷಣದಲ‍್ಲಿ ಹಳ‍್ಳಿಯ ಜನ ಮೈದಾನದಲ‍್ಲಿ ಸೇರಿಬಿಡುತ‍್ತಿದ‍್ದರು
ನಾಲ‍್ವರು ಮಕ‍್ಕಳೂ ತಾಳ ಮದ‍್ದಲೆ ಖಂಜರಿಗಳನ‍್ನು ಬಾರಿಸುತ‍್ತಾ ಹಿಂದಿರುತ‍್ತಿದ‍್ದರು
ಆ ಸಮಯಕ‍್ಕೆ ಸರಿಯಾಗಿ ಖಂಜರಿಯನ‍್ನು ಬಾರಿಸಿಕೊಂಡು ಒಬ‍್ಬ ಮನುಷ‍್ಯನು ಆ ಗಲ‍್ಲಿಯಲ‍್ಲಿಯೇ ಬಂದನು
[← ಮರಾ. ಖಂಜರೀ, ಖಂಜಿರೀ; ಹಿಂ. ಖಂಜರೀ]
ತಾವರೆಯಂತೆ ಕಣ‍್ಣುಳ‍್ಳವನು; ವಿಷ‍್ಣು (ಕಿ).
“ಕಂಜವೈರಿಯೊಳು ಮಾಸದೊಳು ತಿಂಗಳು ಸೀರೆ ಗಂಜುಗಳೊಳಂ ಜವಳಿ ಸಾಮಾನ‍್ಯ ಚಾಪಲಗಳುಂ ಜಾವಳವೆನಿಕ‍್ಕು”
ಕಮಲವನ‍್ನೇ ಬಾಣವನ‍್ನಾಗಿ ಉಳ‍್ಳವನು; ಕಾಮ (ಕಿ).
ಕಮಲದಲ‍್ಲಿ ಹುಟ‍್ಟಿದವನು; ಬ‍್ರಹ‍್ಮ:
ಕಂಜಸಂಭವ ಪಿತನು ಬಂದನು ನಂಜಿನಲಿ ಪವಡಿಸುವ ಬಂದನು
ಕಮಲಗಳಿಗೆ ಪ‍್ರಿಯನಾದವನು; ಸೂರ್ಯ:
ಮಂಜಿನ ಪುಂಜಮೊತ‍್ತರಿಸಿ ಮುತ‍್ತಿ ಮುಸುಂಕೆ ಭಯಾರ್ತಿಗೊಳ‍್ವನೇ ಕಂಜಸಖಂ
ಕಮಲವನ‍್ನೇ ಮನೆಯಾಗಿ ಉಳ‍್ಳವಳು; ಲಕ‍್ಷ‍್ಮಿ (ಕಿ).