Kannada Nighantu by Kannada Sahitya Parishattu : Vol-4
ನೀನು ಭಾಗೀರಥಿಗೆ ಮಾಡಿದ ಮೋಸವೇ ಈಗ ತಿರುಗುಪ್ಪು ಹೂಡಿದೆ
ರಾಯರ ಮೇಲೆಯೆ ಖಟ್ಲೆಯು ತಿರುಗುಪ್ಪಾಗಿ, ಐನೂರು ರೂಪಾಯಿ ದಂಡ, ಆರುತಿಂಗಳ ಸಶ್ರಮ ಶಿಕ್ಷೆಯಾಯಿತು
ನಡು ಸಣ್ಣದಾದರೆ ಮನ ದೊಡ್ಡದಾದರೆ ಕಾಂತೆ ಮೆಚ್ಚಾಗುವೆ ನೀನು ನಡು ಮನಗಳ ಗಾತ್ರ ತಿರುಗುಮುರುಗಾದರೆ ಮತ್ತೆ ನಾ ಹೇಳುವುದೇನು
ನುಲೋ ಎಂಬ ಪರ್ವತದ ಮೇಲೆ ತಿರುಗುಮುರುಗು ಪಾದಗಳುಳ್ಳ ಎಂಟು ಬೆರಳುಳ್ಳ ಜನರಿದ್ದಾರೆ
ಅವರು ಅದೇ ಮಾತನ್ನು ತಿರುಗೂಮುರುಗೂ ಆಡುತ್ತ ಹೊರಬಿದ್ದರು
ತಿರುಗಮುರಾಗ ಮತ್ತೆ ಅದೇ ಇದ್ದಕಿದ್ದ ಹಾಗೆ ಇದೆ
ಆ ರಭಸಕಸುರದಳಗಳ್… ಕಂಗೆಟ್ಟು ದೆಸೆಗೆಟ್ಟು ಸುಳಿಸುತ್ತಿದುವು ಮರಳಿ ತಿರ್ರನೆ ತಿರುಗಿಮುರುಗಿ
(ಸಾಲ ಮುಂತಾದುವನ್ನು) ಹಿಂದಿರುಗಿಸುವಿಕೆ,- ಮರಳಿ ಕೊಡುವಿಕೆ; "ನಿಷ್ಕೃತಿ"
(ನಾಚಿರಾ. ಕಿ).
[ತಿರುಗು1 + - ಹ2]
">
"ತಿರುಪು ಮೊಳೆಯನ್ನು ತಿರುಗಿಸಿ ಬಿಗಿಸುವ ಸಲಕರಣೆ: ತಿರುಪುಳಿ, ತಿರುಗುಳಿ"
(Screw-driver. ಇಂಕನಿ).
[ತಿರುಗು1 + - ಉಳಿ5]
">
ತಿರುಚಿಕೊಂಡಿರುವ ಕೊಂಬು; ಹೊಸೆದುಕೊಂಡಿರುವ ಕೊಂಬು:
ಕಾಳ್ಕೋಣ ಕಡವೆ ಸಾರಗ ಜಿಂಕೆಗಳ ಕವಲ್ಗೊಂಬುಗಳ್ ತಿರುಗೊಂಬುಗಳ್ ನೀಳ್ದ ಕೊಂಬುಗಳ್