Kannada Nighantu by Kannada Sahitya Parishattu : Vol-2
ಕಮಲದ ಎಸಳಿನಂತೆ ಕಣ‍್ಣುಳ‍್ಳವಳು:
ಅಂಜುವೆಯೇತಕೆ ಕಂಜಪತ‍್ರಾಂಬಕೆ
[ಸಂ. ಕಂಜಪತ‍್ರಾಂಬಕಾ (ಕಂಜಪತ‍್ರ + ಅಂಬಕ + -)]
ಕಮಲಗಳಿಗೆ ಪ‍್ರಿಯನಾದವನು; ಸೂರ್ಯ:
ಪಿಂಜರರುಚಿ ರಂಜಿಸಿದುದಂದು ಕಂಜಪ‍್ರಿಯನಾ
ಕಮಲವನ‍್ನೇ ಬಾಣವನ‍್ನಾಗಿ ಉಳ‍್ಳವನು; ಕಾಮ (ಕಿ).
ಕಮಲದಲ‍್ಲಿ ಹುಟ‍್ಟಿದವನು; ಬ‍್ರಹ‍್ಮ:
ಆ ವಧು ಯೌವನೋದಯ ರಸಾಯನಸಿದ‍್ಧಿ ಮನೋವಿಮೋಹ ಸಂಭಾವನವಿದ‍್ಯೆ ಕಂಜಭವ ಕೌತುಕ ಸೃಷ‍್ಟಿ
ರಂಜಕರು ನಾವಲ‍್ಲ ಜೂಜಿಗೆ ಕಂಜಭವ ತಾನು
ಕಮಲದಂತೆ ಮುಖವುಳ‍್ಳವಳು; ಕಮಲಮುಖಿ:
ಕಂಜಮುಖಿಯ ಕರತಲದಂಗುಲಿಯೊಳು ರಂಜಿಸಿದವು ಬೆಳ‍್ಳುಗುರ್ಗಳು
[ಸಂ.ಕಂಜಮುಖೀ (ಕಂಜ + ಮುಖ +-)]
೧. ಸೂರ್ಯ. ೨. ಆನೆ. ೩. ಹೊಟ‍್ಟೆ. ೪. ಬ‍್ರಹ‍್ಮ. ೫. ನವಿಲು. ೬. ಮುನಿ.
ಎರಡು ಸಲ ಬಾಗಿರುವ ಅಲಗುಳ‍್ಳ ಕಿರುಗತ‍್ತಿ; ಕಠಾರಿ:
ಪಂಜಿನವರ ಬಗೆನೋಡಿ ರಾಜೇಂದ‍್ರ ಕಂಜರಕೆ ಕೈಯ ಹಾಕಿ
ಒಬ‍್ಬನು ಈ ಅಲ‍್ಲೀ ಆದಿಲ ಶಹನನ‍್ನು ಖಂಜೀರ ಚುಚ‍್ಚಿ ಕೊಂದುಹಾಕಿದನು
ಸಿರಿಯ ಹರಿಯಡೆಯೊಳಬ‍್ಧಿಯೊಳಿರದೇಳ‍್ವ ಸುವರ್ಣ ಕಂಜರಜದೊಡವೆರೆದೊಳ‍್ದೆರೆಗೆ ದೊರೆಯಾದುದು ವಧೂವರರೆಡೆಯೊಳ್ ಮಿಸುಪ ಮಿಸುನಿದೆರೆ