Kannada Nighantu by Kannada Sahitya Parishattu : Vol-4
ಸುಂದರಾಂಗನ ದುರ್ವರ್ತನವೆಲ್ಲ ಪ್ರಜೆಗಳಿಗೆ ತಿಳಿಯಲು ಅವರು ತಿರುಗಿ ಬಿದ್ದು … ಸತ್ಯವಿಕ್ರಮನನ್ನು ಬಿಡಿಸಿಬಿಟ್ಟರು
ಆದರೆ ಕೆಲಸ ಬಿದ್ದಾಗ ಅವರೊಡನೆ ಸ್ನೇಹ ಬೆಳಸುತ್ತಿದ್ದನು. ತಕ್ಷಣ ತಿರುಗಿ ಹೂಡುತ್ತಿದ್ದನು
ಪ್ರತಿಯಾಗಿ ಹೇಳು; ಎದುರುತ್ತರ ಕೊಡು:
ದೊಡ್ಡವರ ಮಾತಿಗೆ ತಿರುತಿರುಗಿ ಅನ್ನಬಾರದು
[ದೇ. || ತುಳು. ತಿರ್ಗು, ತಿಂರ್ಗು; ತೆಲು. ತಿರುಗು]
೧. ಸುತ್ತುವಿಕೆ; ಚಕ್ರಾಕಾರವಾಗಿ ಚಲಿಸುವಿಕೆ. 'ತಲೆ ತಿರುಗು2’ ಪರಾ.
೨. ತಲೆಕೆಳಗಾಗುವಿಕೆ. 'ತಿರುಗು ಮುರುಗು1’ ಪರಾ.
(ದನಗಳಿಗೆ ಬರುವ) ತಿರುಗಿ ತಿರುಗಿ ಬೀಳುವ ಒಂದು ಬಗೆಯ ರೋಗ; ತಲೆದೂಗ ರೋಗ:
ಎಡದತ್ತ ತಿರಿಗಿ ತೊಟ್ಟನೆ ಕೆಡೆವೊಡೆ ಬಲದೊಳ್… ಮೂಗಿನ ಸೆರೆಯಂ ಬಿಡುವುದು ತಿರುಗುತ್ತದವ ಕಮಂ ಪಿಂಗಿಸುಗುಂ
೧. ತಿಳ್ಳಿ ಮೊದಲಾದ ಆಟಗಳಲ್ಲಿ ಮಾಡುವ ಪ್ರತಿಧಾಳಿ:
ಈ ಸರತಿ ರಾಮನ ಕಡೆಯವರು ಬಹಳೇ ಜಾಗ್ರತೆಯಿಂದ ಆಟವನ್ನು ಆಡಿದ್ದರಿಂದ ತಿರುಗುಪ್ಪಾಗಿ ತಿರುಗಿ ಎರಡನೆಯ ಮನೆಯವರೆಗೆ ಉಪ್ಪು ಏರಿ ಬಂದಿತ್ತು
೨. (ಆಲಂ) ತಿರುಗಿ ಬೀಳುವಿಕೆ; ತಿರುಮಂತ್ರ:
ತನ್ನ ಶಿಷ್ಯನೇ ತನಗೆ ತಿರುಗುಪ್ಪು ಕೊಟ್ಟನು