Kannada Nighantu by Kannada Sahitya Parishattu : Vol-2
ಕಮಲವನ‍್ನು ಹೊಕ‍್ಕುಳಲ‍್ಲಿ ಉಳ‍್ಳವನು; ವಿಷ‍್ಣು.
ಕಂಜನಾಭಿಯಲ‍್ಲಿ ಕುಂಜರ ಬಂದು ಮಂದಿರದವರನೆಲ‍್ಲ ಕೊಂದಿತ‍್ತು
ತಾವರೆಯ ದಂಟು, __ದೇಟು (ಕಿ).
ಆ ಕೆಱೆಗೆ ತೂಬು ಬಿಸಿಲ ಸಂಭ‍್ರಮದ ಕಲ‍್ಲು ಕಂಜನಾಳದ ನೂಲಿನ ಕಂಭ
ಕುಂಜರಂ ನಾ ನಿನ‍್ನ ಮಸ‍್ತಕ ಕಂಜನಾಳಕ‍್ಕೆನುತಡಸಿ ಬರೆ
ಕಂಜನಾಳದಿ ಕಟ‍್ಟುವಡೆವುದೆ ಕುಂಜರನು
ಕಮಲದಂತೆ ಕಣ‍್ಣುಳ‍್ಳವನು; ಕಮಲಾಕ‍್ಷ; ವಿಷ‍್ಣು.
ಕಮಲದಂತೆ ಕಣ‍್ಣುಳ‍್ಳವಳು; ಕಮಲಾಕ‍್ಷಿ (ಕಿ).
[ಸಂ. ಕಂಜನೇತ‍್ರಾ (ಕಂಜ + ನೇತ‍್ರ + -)]
ಕಮಲದ ದಳ, __ಎಸಳು. ‘ಕಂಜಪತ‍್ರಾಂಬಕೆ’ ಪರಾ.