logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರುಗು1
೪. ಹೊರಳಿಸು; ತಿರುಗಿಸು:
ಭೀಮಗಜ ಕಟ್ಟಿದುದು ಬೀದಿಗಳ ತಿರುಗಲಾಪರೆ ಸಮಯವಿದು
(ಕುವ್ಯಾದ್ರೋ. ೩-೧);

ತಿರುಗು1
ತನ್ನಿರವ ಸುಜ್ಞಾನದೃಷ್ಟಿಯೊಳು ತಿರುಗಿ ನಿಟ್ಟಿಸಬೇಕು ಮುಕ್ಕಣ್ಣನಲ್ಲದೆಲ್ಲರಿಗೆ ಬಹುದೆ ಸುಖಸಿದ್ಧಿ
(ಭರಚ. ೫-೭೭).

ತಿರುಗು1
೫. ಗಿರಕಿಹೊಡೆ; ಚಕ್ರಾಕಾರವಾಗಿ ಸುತ್ತು:
ಇಟ್ಟಿಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ
(ಬಸವ. ೫೭೮).

ತಿರುಗು1
೬. ಕಳೆ:
ಮೇದಿನಿಯಲೊಂದಬುದ ತಿರುಗಲು ಸುರರಿಗೊಂದು ದಿನ
(ಸಂಭಪ .೪-೯).

ತಿರುಗು1
∆ತಿರುಂಗು
೩. 'ತಿರುಂಗಿಸು ’ ಪರಾ.

ತಿರುಗು1
ತಿರುತಿರುಗು
(ದ್ವಿರುಕ್ತಿ):
ನರನ ರಥ ಸುಳಿಗಾಳಿಯಂತಿರೆ ತಿರುತಿರುಗಿದುದು ವಿಶ್ವತೋಮುಖದಿ
(ಕುವ್ಯಾದ್ರೋ. ೧೪-೨೬).

ತಿರುಗು1
ತಿರುಗದ ದಾರಿ =
ಹಿಂದಕ್ಕೆ ಬರದ ದಾರಿ; ಯಮಲೋಕದ ಹಾದಿ:
ವಾರಿಜಗಂಧಿ ನಿನ್ನಯ ಕಾಂತ ತಿರುಗದ ದಾರಿಯ ಹೋದಾತ ಬಹನೆ
(ಮೋಹತ. ೯-೧೮).

ತಿರುಗು1
ತಿರುಗದ ಹಾದಿಯ ಹತ್ತು =
ಸತ್ತುಹೋಗು:
ಕಾದಿ… ತಿರುಗದ ಹಾದಿಯ ಹತ್ತಿದರ್
(ಮೋಹತ. ೧೨-೩೮).

ತಿರುಗು1
ತಿರುಗಿ ನೋಡು =
ಗಮನಕೊಡು; ಲಕ್ಷಿಸು:
ಆ ಕಡೆ ನಾನು ತಿರುಗಿ ನೋಡಲೂ ಇಲ್ಲ
(ಪುನರು. ೧೯೨).

ತಿರುಗು1
ತಿರುಗಿ ಬರು =
ಬಳಸಿಬರು; ಸುತ್ತಿಬರು:
ತಿರುಗಿ ಬಾಹೆನೊ ಧರೆಯನೆಲ್ಲವನುರಿವ ಬೇಗೆಯೊಳೆಯ್ದೆ ಬೇವೆನೊ
(ಬಸಪು. ೬೦-೫೮).


logo