Kannada Nighantu by Kannada Sahitya Parishattu : Vol-2
೧. ನೀರಿನಲ‍್ಲಿ ಹುಟ‍್ಟಿದ‍್ದು; ತಾವರೆ; ಕಮಲ:
ಇದಱೊಳ್ ತೋಱಿತ‍್ತು ಕೊಳಂ ಪರಿವಿಕಸಿತ ಕನಕಕಂಜಕಿಂಜಲ‍್ಕ ಪುಂಜ ಪಿಂಜರಿತ ಜಳಂ
ದಿನಪನ ಕೆಯ‍್ಯ ಕಂಜದೊಡವುಟ‍್ಟಿದ ತಾವರೆ ಕಾಮಚಾಪದಿಂ ಜನಿಯಿಸಿದಿಕ‍್ಷು ಚಂದ‍್ರನಮರ್ದಿಂ ಮಡುಗೊಂಡ ಕೊಳಂ
ಕಂಜ ಕುಮುದಂಗಳಿಲ‍್ಲದ ಸರಂ ಸರದಿಂದ ರಂಜಿಸದ ಶುಕಪಿಕಂ . . . ಇಲ‍್ಲವಾ ನಾಡೊಳು
ಕಮಲವನ‍್ನು ಹೊಕ‍್ಕುಳಲ‍್ಲಿ ಉಳ‍್ಳವನು; ಪದ‍್ಮನಾಭ; ವಿಷ‍್ಣು (ಕಿ).
ಕಮಲದಲ‍್ಲಿ ಹುಟ‍್ಟಿದವನು; ಬ‍್ರಹ‍್ಮ.
ಕಂಜಜನಯ‍್ಯ = ಬ‍್ರಹ‍್ಮನ ತಂದೆ; ವಿಷ‍್ಣು:
ಖಗಪತಿಗಮನ ಕಂಜಜನಯ‍್ಯ ರಕ‍್ಷಿಸು ನಮ‍್ಮನನವರತ