Kannada Nighantu by Kannada Sahitya Parishattu : Vol-4
ತಿಟ್ಟನೆ ತಿರುಗುವ ಗಾಣದೆತ್ತಿನಂತೆ
ಶೋಕಾತುರದೊಳೊಂದೆಡೆಯೊಳುಂ ಕಾಲ್ ನಿಲ್ಲದೆ ಭ್ರಮೆಗೊಂಡು ತಿರುಗುತ್ತ
ಕಾಡಿನಲಿ ತಿರುಗುವಗೆ ಕನಕಭೂಷಣವೇಕೆ
ಮೂಡ ಪಡವಲು ತಿರುಗು, ಬಡಗ ತೆಂಕಲು ತಿರುಗು
ಗಂಡಸು ಕೂತು ಕೆಟ್ಟ, ಹೆಂಗಸು ತಿರುಗಿ ಕೆಟ್ಟಳು
೨. ಹಿಂದಕ್ಕೆ ಹೋಗು; ಹಿಂಜರಿ; ಹಿಮ್ಮೆಟ್ಟು:
ದೊರೆಯಳಿದನೇ ಸ್ವಾಮಿದ್ರೋಹರು ತಿರುಗಿ
ಅಸಿತಧ್ವಜಂ ಬವರದೊಳ್ಮುರಿದು ಭಂಗಿತವಾಗಿ ತಿರುಗಿದಂ ತನ್ನ ಪಟ್ಟಣಕ್ಕೆ
ಅಟ್ಟಿದೊಡೆ ತಿರುಗಿ ಮುರಿಮುರಿದೊಟ್ಟೈಸುತೆ ಕೊಂಕಿ… ಓಡಿತೆಸೆವ ಮಸಕದ ಶಶಕಂ
ಕೊಂಚ ದೂರ ಹೋಗಿ ಬಲಕ್ಕೆ ತಿರುಗಬೇಕು