Kannada Nighantu by Kannada Sahitya Parishattu : Vol-2
“ಕೋವಿದಾರಃ, ಚಮರಿಕಃ, ಕುದ‍್ಪಾಲಃ, ಯುಗಪತ‍್ರಕಃ ಈ ೪ ಕಂಚಾಳದ ಮರ”
ವೇಗದಿಂ ಕಂಪಿಸುತ‍್ತಿದೆ ಕಂಚಾಳದ ಕೇತನಂ ವಿಷಮ ಭೂಭಾಗೋಪಘಾತಂಗಳಿಂ
ಕಾರಾಚ ಕಗ‍್ಗಲಿ ಕಂಚಿವಾಳದ ಮರ ಸೂರಮಾರ್ಗವ ತಡೆದಿಹುವು
ಅಂತಃಪುರದ ಅಧಿಕಾರಿ; ರಾಣಿವಾಸದ ಪಾರು ಪತ‍್ಯಗಾರ:
ಬರುವನಿಲ‍್ಲಿಗೆ ಬಿಡನರಮನೆಗೋಡೆಂದು ಇರದೆ ಪೇಳಿದ ಕಂಚುಳಿಕನು
ತೊಟ‍್ಟಿರ್ದ ಧರಾತಳಮೆಂಬ ಪೆಣ‍್ಣ ಪೊಸಕಂಚುಳಿಕೆಯ ಸೀರ್ಮುತ‍್ತಿನಂದಮಾದುವು ಪನಿಗಳ್
ಅಬ‍್ಜಿನೀದಳದಳವಟ‍್ಟ ಕಂಚುಳಿಕೆ ಕೆಂದಳಿರ್ಗೊಂಚಲ ಚಲ‍್ಲಣಂ ಪ‍್ರವಾಳಳತೆಯ ಬಾಲಗಚ‍್ಚೆ ಬಲಕಿಕ‍್ಕಿದ ಚಂಪಕ ಮಾಲೆ ಶೋಭೆಯಂ ಬಳೆಯಿಸೆ
ಕಿರ್ಗಟ‍್ಟಿನ ಸುರಗಿಯ ಕಟ‍್ಟಿದ ಚಿಂದರಿಯ ತೊಟ‍್ಟ ಕಂಚುಳಿಕೆಯ
ನಿದ‍್ರೆಗೈದಿಂದುಹಾಸನ ಕುಂಚುಳಿಕೆಯಲಿರ್ದ ಪತ‍್ರವ ನೋಡಿಕೊಂಡು ತಿರ್ದಿ
(ಎಕ. XII, ಮದ‍್ದಗಿ, ೪೦-೨; 950).
ಮುಗಿಲ ಪೂವಂ ಸೂಡುವಳ್ ತಾರೆಯಂ ತಿಱಿವಳ್ ಮುತ‍್ತುಗಳೆಂದು ಚಂದ‍್ರರವಿಯಂ ಕಂಚೋಲೆಯೆಂದಿಕ‍್ಕುವಳ್ ನಿಱಿಯಂ ಸುತ‍್ತುವಳೇೞುವಾರ್ಥಿಚಯಮಂ ಶ‍್ರೀಕೀರ್ತಿ ರೇಚಾಂಕನಾ