logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರುಗಿಸು
ಇತ್ತ ಬಲದಲಿ ಬಲಕೆ ಮೊಗವಿಡಲತ್ತಲೆಡದಲಿ ಮರಳಲಲ್ಲಿಂದತ್ತ ತಿರುಗಿಸಿ ಬಳಲಿಸಿದನಸುರಾರಿ ದಿಗ್ಗಜವ
(ಕುವ್ಯಾದ್ರೋ. ೩-೫೩).

ತಿರುಗಿಸು
೨. ಚಕ್ರಾಕಾರವಾಗಿ ಸುತ್ತಿಸು:
ನೋಟ ವಿಷಯದಿಂದೊಳಗಾದ ಪುರುಷರ ಕೋಟಲೆಗೊಳಿಸಿ ಸುತ್ತಿಸುತೆ ಆಟವಿದೆಂಬಂತೆ ತಿರುಗಿಸುತಿರ್ದರು ಚಾಟಳದುಯ್ಯಾಲೆಗಳನು
(ಮೋಹತ. ೧೪-೮೯);

ತಿರುಗಿಸು
ಕರ್ಣಜಂ ಬಳಿಕ ನಸುನಗೆಯೊಳೆಡಗೈಯ ಕೋದಂಡಮಂ ತಿರುಗಿಸುತ್ತಿಂತೆಂದನು
(ಜೈಮಿಭಾ. ೧೨-೧೭).

ತಿರುಗಿಸು
೩. ಬದಲಿಸು; ಬೇರೆ ಕಡೆಗೆ ಹೊರಳಿಸು:
ಜನರ ತಾಮಸ, ಮೂಢಪದ್ಧತಿಗಳನ್ನು ಸಾತ್ವಿಕಭಕ್ತಿಗೆ ತಿರುಗಿಸುವ ಕಾರ್ಯವನ್ನು ಇವರು ಹೆಚ್ಚಾಗಿ ಮಾಡಿರಬೇಕೆನ್ನಿಸುತ್ತದೆ
(ಜಗದಾ. ೧೧೬);

ತಿರುಗಿಸು
ನಾವು ಮೊದಲು ಆಡಿದ ಮಾತು ತಿರುಗಿಸಲಿಕ್ಕೆ ಏನೇನು ಹಿಂದೆ ಮುಂದೆ ನೋಡುವದಿಲ್ಲ
(ಮುಂಬಯಿ. ೫-೧೩);

ತಿರುಗಿಸು
ಯಾವ ಆಕಾರಕ್ಕಾದರೂ ತಿರುಗಿಸಬಹುದು
(ಹಣಪ್ರ. ೧೬).

ತಿರುಗಿಸು
೪. ಮಗುಚು; ಬುಡಮೇಲು ಮಾಡು:
ಉಂಡೆಯಂ ಕೊಯಿದು ಮುಖವ ಮೇಲಾಗಿ ತಿರುಗಿಸಿಕೊಂಡು
(ಸೂಪಶಾ. ೧-೪೮);

ತಿರುಗಿಸು
ಚಪ್ಪಟೆಯಾದ ಸೌಟಿನಿಂದ ಬಾಣಲೆಗೆ ಹಾಕಿದ ಪೂರಿಯನ್ನು ತಿರುಗಿಸುತ್ತಿರಬೇಕು
ಅಡುಸೌ. ೧೦೬).

ತಿರುಗಿಸು
∆ತಿರುಂಗಿಸು:
೩. ಹರಿಣಾಕ್ಷಿ ... ತಿರುಂಗಿಸಿದಾಸ್ಯಪದ್ಮಮಂ ಪಿಡಿದತಿಕಷ್ಟದಿಂ ನೆಗಪಿಯುಂ ನೆರೆ ಚುಂಬಿಸದಾದೆ ನಾನದಂ
(ಶಾಕುಂತ. ೪೩-೭೬).
[ತಿರುಗು1 + - ಇಸು3]

ತಿರುಗು1
ತಿರುಂಗು
(ಕ್ರಿ).
೧. ಸುತ್ತು; ಅಲೆದಾಡು: ಓಡಾಡು:
ಸುಟ್ಟುರೆಯ ತಱಗೆಲೆಯಂತೆ ತಿಱ್ಚನೆ ತಿರುಗಿ ಬೀೞ್ವಲ್ಲಿ
(ಕಾದಂಪೂ. ೧೮೬).


logo